ವಿದ್ಯುತ್ ಅವಘಡ: ಆಲತ್ತೂರು ಗ್ರಾಮದಲ್ಲಿ ರೈತ ಮಹಿಳೆ ಸಾವು
ಚೆಸ್ಕಾಂ ನಿರ್ಲಕ್ಷ್ಯದಿಂದಾಗಿ ಸೆಕೆಂಡರಿ ವಿದ್ಯುತ್ ಲೈನ್ ನ ತಂತಿ ತುಂಡಾಗಿ ಬಿದ್ದ ಪರಿಣಾಮ ರೈತ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ನಡೆದಿದೆ.

ಜಮೀನಿನಿಂದ ಮನೆಗೆ ಬರುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮರಣ
ಚಾಮರಾಜನಗರ: ಚೆಸ್ಕಾಂ ನಿರ್ಲಕ್ಷ್ಯದಿಂದಾಗಿ ಸೆಕೆಂಡರಿ ವಿದ್ಯುತ್ ಲೈನ್ ನ ತಂತಿ ತುಂಡಾಗಿ ಬಿದ್ದ ಪರಿಣಾಮ ರೈತ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾಯಣ್ಣ ಅವರ ಪತ್ನಿ ಮಾಳಮ್ಮ (೬೦) ವಿದ್ಯುತ್ ಗೆ ಬಲಿಯಾದ ನತದೃಷ್ಟ ರೈತ ಮಹಿಳೆ. ಇವರು ಜಮೀನಿನಿಂದ ಮನೆಗೆ ಬರುವಾಗ ಈ ಘಟನೆ ನಡೆದಿದೆ. ಇವರು ಮನೆಯಿಂದ ಜಮೀನಿಗೆ ಹೋಗಿ ವಾಪಸ್ ಬರುವಾಗ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ಗೊತ್ತಿಲ್ಲದೆ ತುಳಿದ ಮಾಯಮ್ಮ (೬೦) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೆಸ್ಕಾಂ ವಿರುದ್ಧ ಆಕ್ರೋಶ:
ಮಹಿಳೆ ಸತ್ತ ವಿಷಯ ತಿಳಿದ ಗ್ರಾಮಸ್ಥರು ಶವದ ಬಳಿ ಸೇರಿ ಬೇಗೂರು ಸೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೇಗೂರು ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಬೇಗೂರು ಸೆಸ್ಕಾಂ ಅಧಿಕಾರಿಗಳನ್ನು ಕರೆಯಿಸಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿದರು. ಬೇಗೂರು ಸೆಸ್ಕಾಂ ಎಇ ಶಂಕರಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ನಿಗಮದ ಪ್ರಕಾರ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದರೆ ಐದು ಲಕ್ಷ ರೂ ಪರಿಹಾರ ನೀಡಲಿದೆ. ಅದರಂತೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಪೊಲೀಸರು ಹಾಗೂ ಸೆಸ್ಕಾಂ ಅಧಿಕಾರಿಗಳ ಮಾತಿಗೆ ಮಣಿದ ಗ್ರಾಮಸ್ಥರು ಶವವನ್ನು ಗುಂಡ್ಲುಪೇಟೆ ಶವಾಗಾರಕ್ಕೆ ಸಾಗಿಸಿದರು. ಶವ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಮೃತರ ಶವವನ್ನು ನೀಡಲಾಯಿತು. ನಂತರ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆದಿದೆ. ಗ್ರಾಮದಲ್ಲಿ ವಿದ್ಯುತ್ ಅವಘಡಕ್ಕೆ ಬೇಗೂರು ಸೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಬೇಗೂರು ಠಾಣೆಯ ಪೊಲೀಸರಿಗೆ ಮೃತಳ ಗಂಡ ಮಾಯಣ್ಣ ದೂರು ನೀಡಿದ್ದಾರೆ.
ವರದಿ: ಗೂಳಿಪುರ ನಂದೀಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


