ಚಂಡಮಾರುತ ರೂಪುಗೊಳ್ಳುವ ಮುನ್ನವೇ ಕ್ಯಾರ್ ಎಂದು ನಾಮಕರಣವಾಗಿತ್ತು
ಪೂರ್ವ -ಅರೇಬಿಯನ್ ಸಮುದ್ರ ಮೂಲದ ಚಂಡಮಾರುತ ರೂಪುಗೊಳ್ಳುವುದಕ್ಕೆ ಮುನ್ನವೇ ಅದಕ್ಕೆ ಕ್ಯಾರ್ ಚಂಡಮಾರುತ ಎಂದು ನಾಮಕರಣ ಮಾಡಲಾಗಿತ್ತು.

ಬೆಂಗಳೂರು: ಪೂರ್ವ -ಅರೇಬಿಯನ್ ಸಮುದ್ರ ಮೂಲದ ಚಂಡಮಾರುತ ರೂಪುಗೊಳ್ಳುವುದಕ್ಕೆ ಮುನ್ನವೇ ಅದಕ್ಕೆ ಕ್ಯಾರ್ ಚಂಡಮಾರುತ ಎಂದು ನಾಮಕರಣ ಮಾಡಲಾಗಿತ್ತು.
ಜೊತೆಗೆ ಮುಂಬರುವ ಚಂಡಮಾರುತಗಳಿಗೂ ಈಗಾಗಲೇ ಹೆಸರು ಇಡಲಾಗಿದೆ. ಮಹಾ ಮತ್ತು ಬುಲ್ ಬುಲ್ ಎಂದು ನಾಮಕರಣ ಮಾಡಲಾಗಿದೆ.ಬಂಗಾಳ ಕೊಲ್ಲಿಯ ಚಂಡಮಾರುತಗಳಿಗೆ ಹೆಸರು ನಿರ್ಧರಿಸಲಾಗಿದೆ, ಹಾಗೆಯೇ ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರಗಳ 8 ದೇಶಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. ಪ್ರತಿ ದೇಶಕ್ಕೂ ಎಂಟು ಚಂಡ ಮಾರುತಗಳ ಹೆಸರಿಟ್ಟಿದ್ದು, ಈ ದೇಶಗಲ ಹವಾಮಾನ ಇಲಾಖೆಯಿಂದ 64 ಹೆಸರುಗಳಿಗೆ ಅನುಮತಿ ನೀಡಿದೆ.
ಕ್ಯಾರ್ ಎಂಬ ಹೆಸರು ಬರಲು ಮ್ಯಾನ್ಮಾರ್ ಕಾರಣ, 2005ರಲ್ಲಿ ಮ್ಯಾನ್ಮಾರ್ ನಲ್ಲಿ ಸಂಭವಿಸಿದ ಮೊದಲ ಚಂಡಮಾರುತ್ತಕ್ಕೆ ಪ್ಯಾರ್ ಎಂದು ಹೆಸರಿಡಲಾಗಿತ್ತು. 2004 ರಲ್ಲಿ ಭಾರತದಲ್ಲಿ ಸಂಭವಿಸಿದ ಮೊದಲ ಚಂಡಮಾರುತಕ್ಕೆ ಅಗ್ನಿ ಎಂದು ಹೆಸರಿಸಲಾಗಿತ್ತು,2019ರಲ್ಲಿ ಸಂಭವಿಸಿದ ಮೊದಲ ಚಂಡ ಮಾರುತಕ್ಕೆ ವಾಯು ಎಂದು ಕರೆಯಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


