ತುಂಗಭದ್ರ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ: ಹಂಪಿ ಸ್ಮಾರಕಗಳು ಜಲಾವೃತ
ತುಂಗಭದ್ರ ಜಲಾಶಯದ ತೀರ ಪ್ರದೇಶದಲ್ಲಿ ಬಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆ ಜಲಾಶಯಕ್ಕೆ ಹೆಚ್ಚುತ್ತಿರುವ ಬಾರಿ ಒಳ ಹರಿವು, ಹೊರ ಹರಿವನ್ನ ಹೆಚ್ಚಳಮಾಡುವ ಸಾಧ್ಯತೆ ಹಿನ್ನೆಲೆ ನದಿ ಪಾತ್ರದ ಜನ ಸಾಮಾನ್ಯರಿಗೆ ಟಿ.ಬಿ.ಬೋರ್ಡ್ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಹೊಸಪೇಟೆ: ತುಂಗಭದ್ರ ಜಲಾಶಯದ ತೀರ ಪ್ರದೇಶದಲ್ಲಿ ಬಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆ ಜಲಾಶಯಕ್ಕೆ ಹೆಚ್ಚುತ್ತಿರುವ ಬಾರಿ ಒಳ ಹರಿವು, ಹೊರ ಹರಿವನ್ನ ಹೆಚ್ಚಳ ಮಾಡುವ ಸಾಧ್ಯತೆ ಹಿನ್ನೆಲೆ ನದಿ ಪಾತ್ರದ ಜನ ಸಾಮಾನ್ಯರಿಗೆ ಟಿ.ಬಿ.ಬೋರ್ಡ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಹಂಪಿಯ ತುಂಗಭದ್ರ ನದಿ ದಡದಲ್ಲಿರುವ ಕೋಟಿ ಲಿಂಗ, ಲಕ್ಷ್ಮಿ ದೇವಸ್ಥಾನ, ಚಕ್ರತೀರ್ಥ, ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಒನಕೆ ಕಿಂಡಿ ಮಾರ್ಗ, ಇತಿಹಾಸ ಪ್ರಸಿದ್ದ ಪುರಂದರ ಮಂಟಪ ಸಂಪೂರ್ಣ ಜಲಾವೃತ.
ಈ ವರ್ಷದ ಈ ಎರಡು ತಿಂಗಳಲ್ಲಿ ನಾಲ್ಕನೆ ಬಾರಿಗೆ ನದಿಗೆ ನೀರು ಹರಿ ಬಿಡುತ್ತಿರುವುದು ಇತಿಹಾಸ, ಜಲಾಶಯದಿಂದ ಇನ್ನೂ ಹೊರ ಹರಿವನ್ನ ಹೆಚ್ಚಳಮಾಡುವ ಸಾದ್ಯತೆ ಇದೆ.
ಹೂವಿನಹಡಗಲಿಯಲ್ಲಿ ಪ್ರವಾಹ ಪರಿಸ್ಥಿತಿ:
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನಾದ್ಯಂತ ಒಂದು ರೀತಿಯ ಜಲ ಪ್ರಳಯ ಪರಿಸ್ಥಿತಿ ಎದುರಾಗಿದೆ.
ನಿನ್ನೆ ರಾತ್ರಿ ಪೂರ್ತಿ ಸುರಿದ ಬಾರಿ ಮಳೆಗೆ ತಾಲೂಕಿನ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಎರಡು ದಶಕಗಳಿಂದ ಹನಿ ನೀರು ಕಾಣದ ಕೆರೆಗಳ ಕೋಡಿಗಳು ತುಂಬಿ ತುಳುಕುತ್ತಿವೆ, ನೀರಿನ ರಭಸಕ್ಕೆ ತಾಲೂಕಿನ ಬೂದನೂರು ಕೆರೆ ಕೋಡಿಗೆ ಹಾನಿಯಾಗಿದೆ.
ಹಿರೇಕೊಳಚಿ, ಚಿಕ್ಕಕೊಳಚಿ, ಹಿರೇಹಡಗಲಿ, ಮಾಗಳ, ಬೂದನೂರು, ತುಂಬಿನಕೇರಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಿರೇಕೊಳಚಿ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ಹತ್ತಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿ, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆಲವು ಮನೆಗಳಿಗೆ ಹಾನಿಯಾಗಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


