ರಾಜ್ಯ

ವಿಜಯಪುರ: ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಗರದ ಇಂಡಿ ರಸ್ತೆಯಲ್ಲಿರುವ ದಾಲಿಬಾಯಿ ಚಂದಾಲಾಲ್ ಸಂದೇಶ ಎಂಬುವರ ಪತ್ನಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.

ವಿಜಯಪುರ: ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!
ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ
Published On :

ವಿಜಯಪುರ: ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ನಗರದ ಇಂಡಿ ರಸ್ತೆಯಲ್ಲಿರುವ ದಾಲಿಬಾಯಿ ಚಂದಾಲಾಲ್ ಸಂದೇಶ ಎಂಬುವರ ಪತ್ನಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಮೂಲತಃ ರಾಜಸ್ತಾನದವರಾಗಿರುವ ದಂಪತಿಗೆ 4 ವರ್ಷದ ವಿಶೇಷಚೇತನ ಹೆಣ್ಣು ಮಗುವಿತ್ತು. ಆದರೆ ದಂಪತಿ ಗಂಡು ಮಗುವಿನ ಆಸೆ ಹೊತ್ತಿದ್ದರೂ ಅದು ಸಾಧ್ಯವಾಗಿರಲಿಲ್ಲ.

ಜನಿಸಿದ ನಾಲ್ಕು ಮಕ್ಕಳು ತಲಾ ಒಂದೂವರೆ ಕಿಲೋ ಗ್ರಾಂ ತೂಗುತ್ತಿದ್ದು, ಈ ಪೈಕಿ ಎರಡು ಹೆಣ್ಣು ಹಾಗೂ ಎರಡು ಗಂಡು. ನಾಲ್ಕೂ ಮಕ್ಕಳು ಆರೋಗ್ಯಯುತವಾಗಿದ್ದು ಮುಂಜಾಗರೂಕತಾ ಕ್ರಮವಾಗಿ ಆಸ್ಪತ್ರೆಯ ಎನ್‌ಐಸಿನಲ್ಲಿಡಲಾಗಿದೆ. 

ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡುವುದು ಅಪರೂಪ ಪ್ರಕರಣ. 6 ಲಕ್ಷಕ್ಕೊಬ್ಬಳಂತೆ ಮಹಿಳೆಯರಿಗೆ ನಾಲ್ಕು ಮಕ್ಕಳು ಜನಿಸುತ್ತೆ ಎಂದು ಮುದನೂರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ವೈದ್ಯ ಡಾ. ಆಶಾ ಮುದನೂರ ಹೇಳಿದ್ದಾರೆ.. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.