ಆನೇಕಲ್: ಮಹಿಳೆಯ ಕೊಳೆತ ದೇಹ ಪತ್ತೆ, ಅತ್ಯಾಚಾರ, ಕೊಲೆ ಶಂಕೆ
ಮಹಿಳೆಯ ಮೃತ ದೇಹವೊಂದು ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು ನೆರೆ ಮನೆಯವರು ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ ಘಟನೆ ಸೂರ್ಯನಗರ ಠಾಣಾ ವ್ಯಾಪ್ತಿಯ ಕಿತ್ತಿಗಾನಹಳ್ಳಿಯಲ್ಲಿ ನಡೆದಿದೆ.

ಆನೇಕಲ್ : ಮಹಿಳೆಯ ಮೃತ ದೇಹವೊಂದು ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು ನೆರೆ ಮನೆಯವರು ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ ಘಟನೆ ಸೂರ್ಯನಗರ ಠಾಣಾ ವ್ಯಾಪ್ತಿಯ ಕಿತ್ತಿಗಾನಹಳ್ಳಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ನಿವಾಸಿ ಸುನಿತಾ ದಾಸ್(30) ತನ್ನ ಪತಿ ಸಂತೋಷ್‍ದಾಸ್ ಜೊತೆ ಕಳೆದ 8 ತಿಂಗಳ ಹಿಂದೆ ಬಾಡಿಗೆಗೆ ಮನೆ ಪಡೆದು ನೆಲೆಸಿದ್ದರು. ತನ್ನ ಪತಿ ಬೇರೆ ಕಡೆ ನೆಲೆಸಿದ್ದ ಕಾರಣ ಒಬ್ಬಂಟಿಯಾಗಿದ್ದ ಸುನಿತಾ ಸಮೀಪದ ಮಲಬಾರ್ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಬುಧವಾರ ರಾತ್ರಿ ಆಕೆಯ ದೇಹ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿತು. ಆಕೆಯ ಮೈಮೇಲೆ ಸುಟ್ಟ ಗಾಯಗಳಾಗಿದ್ದು ಗುಪ್ತಾಂಗದ ಮೇಲೂ ಹಲ್ಲೆಯಾಗಿರುವುದು ಕಂಡು ಬಂದಿದೆ. ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿರಬಹುದಾ ಎಂಬ ಶಂಕೆ ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದ್ದು ವೈದ್ಯಕೀಯ ವರದಿ ಮರಣೋತ್ತರ ವರದಿ ಗಾಗಿ ಕಳಿಸಲಾಗಿದೆ ಎಂದು ಸೂರ್ಯ ನಗರ ಪೊಲೀಸರು ತಿಳಿಸಿದ್ದಾರೆ.
ಮನೆ ಮಾಲಿಕ ಗಿರೀಶ್ ಹೇಳಿಕೆ ನೀಡಿ ಕಳೆದ 8 ತಿಂಗಳ ಹಿಂದೆ ಬಾಡಿಗೆಗೆ ಬಂದ ದಂಪತಿಗಳು ನೆಲೆಸಿದ್ದರು. ಇಂದು ವಿಷಯ ತಿಳಿದ ನಂತರ ಪೊಲೀಸರಿಗೆ ದೂರು ನೀಡಿದೆ ಎಂದಿದ್ದಾರೆ. ದೂರು ದಾಖಲಿಸಿಕೊಂಡ ಸೂರ್ಯನಗರ ಪೊಲೀಸರು ತನಿಖೆ ಮುಂದುವಿರಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ನಂಜುಂಡೇಗೌಡ, ವೃತ್ತ ನಿರೀಕ್ಷಕ ವಿಕ್ಟರ್ ಸೈಮಂಡ್ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


