ಶಿವಮೊಗ್ಗ: ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ 2 ತಿಂಗಳ ನಂತರ ಪತ್ತೆ
ಕುಮದ್ವತಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೋರ್ವನ ಶವ ಬರೋಬ್ಬರಿ ಎರಡು ತಿಂಗಳ ನಂತರ ನದಿಪಾತ್ರದಲ್ಲಿ ಪತ್ತೆಯಾಗಿದೆ.

ಶಿವಮೊಗ್ಗ: ಕುಮದ್ವತಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೋರ್ವನ ಶವ ಬರೋಬ್ಬರಿ ಎರಡು ತಿಂಗಳ ನಂತರ ನದಿಪಾತ್ರದಲ್ಲಿ ಪತ್ತೆಯಾಗಿದೆ.
ಕುಂಸಿಯ ಅಮರನಾಥ್ ಅವರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಚೊರಡಿ ಸಮೀಪದ ದೊಡ್ಡಿಮಟ್ಟಿ ಬಳಿ ಕುಮದ್ವತಿ ನದಿ ತೀರದಲ್ಲಿ ದೊರೆತಿದೆ.
ಆಗಸ್ಟ್ ತಿಂಗಳಲ್ಲಿ ಚೊರಡಿ ಕುಮದ್ವತಿ ನದಿ ಸೇತುವೆ ಮೇಲೆ ನಿಂತು ನದಿಯನ್ನು ನೋಡುತ್ತಿದ್ದಾಗ ಬೋಲೇರೋ ಡಿಕ್ಕಿ ಹೊಡೆದು ಮೂವರು ನದಿಗೆ ಬಿದ್ದು ಮೃತಪಟ್ಟಿದ್ದರು. ಮರುದಿನವೇ ರಾಮಪ್ಪ ಎಂಬುವರ ಶವಪತ್ತೆಯಾಗಿತ್ತು. ಆದರೆ, ಹರೀಶ್ ಹಾಗೂ ಅಮರನಾಥ್ ಎಂಬುವವರ ಶವಕ್ಕಾಗಿ ರಕ್ಷಣಾ ಸಿಬ್ಬಂದಿ ಸತತ ಹದಿನೈದು ದಿನಗಳ ಕಾರ್ಯಾಚರಣೆ ನಡೆಸಿದರೂ ಅವರಿಬ್ಬರ ಶವ ಪತ್ತೆಯಾಗಿರಲಿಲ್ಲ. ಹೀಗಾಗಿ ಅಸಮಾಧಾನಗೊಂಡ ಎನ್ ಡಿಆರ್ ಎಫ್ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


