ಶಾಸಕ ಸಿದ್ದು ಸವದಿ ನಿವಾಸದ ಮುಂದೆ ಜೈನಮುನಿ ಶ್ರೀಗಳ ಉಪವಾಸ
ಭದ್ರಗಿರಿ ಬೆಟ್ಟದಲ್ಲಿ ತವದಡ್ಡಿ ಪುನರ್‌ವಸತಿ ಕೇಂದ್ರ ಸ್ಥಾಪನೆ ವಿರೋಧಿಸಿ ಭದ್ರಗಿರಿ ಬೆಟ್ಟದ ಕುಲರತ್ನ ಭೂಷಣ ಮಹಾರಾಜರು ತೇರದಾಳ ಬಿಜೆಪಿ ಶಾಸಕ ಸಿದ್ದ ಸವದಿ ನಿವಾಸದ ಮುಂದೆ ಉಪವಾಸ ಆರಂಭಿಸಿದ್ದಾರೆ.

ಬಾಗಲಕೋಟೆ: ಭದ್ರಗಿರಿ ಬೆಟ್ಟದಲ್ಲಿ ತವದಡ್ಡಿ ಪುನರ್‌ವಸತಿ ಕೇಂದ್ರ ಸ್ಥಾಪನೆ ವಿರೋಧಿಸಿ ಭದ್ರಗಿರಿ ಬೆಟ್ಟದ ಕುಲರತ್ನ ಭೂಷಣ ಮಹಾರಾಜರು ತೇರದಾಳ ಬಿಜೆಪಿ ಶಾಸಕ ಸಿದ್ದ ಸವದಿ ನಿವಾಸದ ಮುಂದೆ ಉಪವಾಸ ಆರಂಭಿಸಿದ್ದಾರೆ.
ಕೃಷ್ಣಾ ತೀರದ ಮುಳುಗಡೆ ಗ್ರಾಮವಾದ ತಮದಡ್ಡಿ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಹಳಿಂಗಳಿ ಗ್ರಾಮದ ಸರ್ವೇ ನಂಬರ ೧೪೨/ಅ ದಲ್ಲಿ ೮೯ ಎಕರೆ ಜಾಗೆ ನೀಡಿದೆ. ಅದರಲ್ಲಿ ಎರಡು ಎಕರೆ ಜಾಗೆಯನ್ನು ಜೈನರ ಪುಣ್ಯಕ್ಷೇತ್ರ ಭದ್ರಗಿರಿಗೆ ನೀಡಿ ಉಳಿದ ೮೭ ಎಕರೆ ಜಾಗೆಯನ್ನು ಪುನರ್‌ವಸತಿ ಕೇಂದ್ರ ನಿರ್ಮಿಸಲು ಮೀಸಲಿರಿಸಲಾಗಿದೆ. ಈ ಜಾಗದಲ್ಲಿ ೬೦೩ ಜೈನ ಗುಂಪುಗಳಿವೆ. ಹಾಗಾಗಿ ಇಲ್ಲಿ ಪುನರ್ ವಸತಿ ಕೇಂದ್ರ ಬೇಡ. ಬೇರೆ ಕಡೆ ಪುನರ್ ವಸತಿ ಕೇಂದ್ರ ನಿರ್ಮಿಸಿ ಎಂದು ಒತ್ತಾಯಿಸಿ ಶ್ರೀಗಳು ಶಾಸಕರ ಮನೆ ಮುಂದೆ ಉಪವಾಸ ಆರಂಭಿಸಿದ್ದಾರೆ.
ಭದ್ರಗಿರಿ ಬೆಟ್ಟವು ೨೩೦೦ ವರ್ಷಗಳ ಹಿನ್ನೆಲೆಯನ್ನು ಹೊಂದಿದ್ದು, ಜೈನ ಧರ್ಮ ಗುಂಪುಗಳುಳ್ಳ ಪುರಾತನ ಕ್ಷೇತ್ರವಾಗಿದೆ. ಖಾಲಿಇ ಇರುವ ಜಾಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವನಸ್ಪತಿ ಗಿಡಗಳನು ನೆಡಲಾಗಿದೆ. ಐತಿಹಾಸಿಕ ಜಾಗವಾಗಿರುವ ಇದನ್ನು ಸರ್ಕಾರ ಉಳಿಸುವ ಕೆಲಸ ಮಾಡಬೇಕು ಎನ್ನುವುದು ಶ್ರೀಗಳ ಆಗ್ರಹವಾಗಿದೆ. ಈಗಾಗಲೇ ೨೦೧೪ ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇಂತಹ ಸನ್ನಿವೇಶದಲ್ಲಿ ಪುನರ್ ವಸತಿ ಕೇಂದ್ರ ಸ್ಥಾಪನೆ ಸೂಕ್ತವಲ್ಲ ಎನ್ನುವುದು ಶ್ರೀಗಳ ವಾದವಾಗಿದೆ.
ಸಂದಿಗ್ದ ಸ್ಥಿತಿಯಲ್ಲಿ ಸವದಿ: ಭದ್ರಗಿರಿ ಕ್ಷೇತ್ರದ ಶ್ರೀಗಳು ಉಪವಾಸ ಆರಂಭಿಸಿರುವುದು ಶಾಸಕ ಸಿದ್ದು ಸವದಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶಾಸಕರ ಮನೆ ಮುಂದೆ ಉಪವಾಸ ಆರಂಭಿಸಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುವ ಭರವಸೆಯನ್ನು ಸವದಿ ಅವರು ನೀಡಿದ್ದಾರಾದರೂ ಶ್ರೀಗಳು ಸಮಸ್ಯೆ ಇತ್ಯರ್ಥಗೊಳಿಸುವವರೆಗೂ ಉಪವಾಸ ನಡೆಸುವುದಾಗಿ ಹಠ ಹಿಡಿದಿದ್ದಾರೆ. ಭದ್ರಗಿರಿ ಕ್ಷೇತ್ರಕ್ಕೆ ಜಾಗ ನೀಡುವ ಕುರಿತ ಮನವಿಗೆ ಅಂದಿನ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದನೆ ಮಾಡಿರುವುದು ಶ್ರೀಗಳ ಹೋರಾಟಕ್ಕೆ ಬಲ ನೀಡಿದೆ. ಸ್ಥಳಕ್ಕೆ ತಹಸೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ವರದಿ: ವಿಠ್ಠಲ ಆರ್. ಬಲಕುಂದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


