ರಾಜ್ಯ

ಗಂಗಾವತಿಯಲ್ಲಿ ರೈಲಿಗೆ ಮೊದಲ ಬಲಿ: ಗುಜರಾತ್ ಮೂಲದ ಯುವಕ ಸಾವು

ಕಿವಿಯಲ್ಲಿ ಹೆಡ್ಫೋನ್ ಇಟ್ಟುಕೊಂಡು ಸಂಗೀತಾ ಆಲಿಸುತ್ತಾ ಬರುತ್ತಿದ್ದ ಯುವಕನೊಬ್ಬ ಆಯಾತಪ್ಪಿ ರೈಲು ಹಳಿಗೆ ಬಿದ್ದು ಸಾವನ್ನಪ್ಪಿದ್ ಘಟನೆ ನಗರದಲ್ಲಿ ನಡೆದಿದೆ.

ಗಂಗಾವತಿಯಲ್ಲಿ ರೈಲಿಗೆ ಮೊದಲ ಬಲಿ: ಗುಜರಾತ್ ಮೂಲದ ಯುವಕ ಸಾವು
ಗಂಗಾವತಿಯಲ್ಲಿ ರೈಲಿಗೆ ಮೊದಲ ಬಲಿ: ಗುಜರಾತ್ ಮೂಲದ ಯುವಕ ಸಾವು
Published On :

ಗಂಗಾವತಿ: ಕಿವಿಯಲ್ಲಿ ಹೆಡ್ಫೋನ್ ಇಟ್ಟುಕೊಂಡು ಸಂಗೀತ ಆಲಿಸುತ್ತಾ ಬರುತ್ತಿದ್ದ ಯುವಕನೊಬ್ಬ ಆಯಾತಪ್ಪಿ ರೈಲು ಹಳಿಗೆ ಬಿದ್ದು ಸಾವನ್ನಪ್ಪಿದ್ ಘಟನೆ ನಗರದಲ್ಲಿ ನಡೆದಿದೆ. ಮೃತನನ್ನು ಗುಜರಾತ್ ರಾಜ್ಯದ ನಂದೆಲಾ ಜಿಲ್ಲೆಯ ದಾವತ್ ಎಂಬ ಗ್ರಾಮದ ವಿಫುಲ್ ತಂದೆ ಭರತ್ (18) ಎಂದು ಗುರುತಿಸಲಾಗಿದೆ. 

ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಕೆಲಸಕ್ಕೆಂದು ಗುಜರಾತಿನ ಹಲವು ಯುವಕರೊಂದಿಗೆ ಬಂದಿದ್ದ ಈ ಯುವಕ, ಬುಧವಾರ ಸಂಜೆ ನಗರದ ಕೊಪ್ಪಳ ರಸ್ತೆಯಲ್ಲಿರುವ ಹಳಿಯನ್ನು ದಾಟಿ ಬಹದರ್ೆಸೆಗೆ ಹೋಗಿದ್ದಾನೆ. ನಿಸರ್ಗದ ಕರೆ ಮುಗಿಸಿ ಕಿವಿಯಲ್ಲಿ ಹೆಡ್ಫೋನ್ ಇಟ್ಟುಕೊಂಡು ಹಳಿ ದಾಟುತ್ತಿರುವಾಗ ಆಕಸ್ಮಿಕ ಆಗಮಿಸಿದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ರೈಲು ಗಂಗಾವತಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  

ಗಂಗಾವತಿಯಲ್ಲಿ ರೈಲು ಸೇವೆ ಆರಂಭವಾಗಿ ಒಂಭತ್ತು ತಿಂಗಳಲ್ಲಿ ಇದೇ ಮೊದಲ ಬಾರಿಗೆ ರೈಲಿಗೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.