ರಾಜ್ಯ

ಸುಳ್ವಾಡಿ ಮಾರಮ್ಮನ ದೇಗುಲದ ಬಾಗಿಲು ತೆರೆಯುವಂತೆ ಗೋಳಾಡಿದ ಭಕ್ತರು

ಕಳೆದ ಡಿಸೆಂಬರ್‌ನಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಕಿಚ್ಚುಗುತ್ತಿ ಮಾರಮ್ಮ ದೇಗುಲದ ಬಾಗಿಲು ತೆರೆಯುವಂತೆ ಭಕ್ತರು ಗೋಳಾಡಿದ್ದಾರೆ.

ಸುಳ್ವಾಡಿ ಮಾರಮ್ಮನ ದೇಗುಲದ ಬಾಗಿಲು ತೆರೆಯುವಂತೆ ಗೋಳಾಡಿದ ಭಕ್ತರು
ಸುಳ್ವಾಡಿ ಮಾರಮ್ಮನ ದೇಗುಲದ ಬಾಗಿಲು ತೆರೆಯುವಂತೆ ಗೋಳಾಡಿದ ಭಕ್ತರು
Published On :

ಚಾಮರಾಜನಗರ: ಕಳೆದ ಡಿಸೆಂಬರ್‌ನಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಕಿಚ್ಚುಗುತ್ತಿ ಮಾರಮ್ಮ ದೇಗುಲದ ಬಾಗಿಲು ತೆರೆಯುವಂತೆ ಭಕ್ತರು ಗೋಳಾಡಿದ್ದಾರೆ.

ಸುಳ್ವಾಡಿ ಮಾರಮ್ಮನ ದೇಗುಲ..ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಕಿಚ್ಚುಗುತ್ತಿ ಮಾರಮ್ಮನ ದೇಗುಲಕ್ಕೆ ಭೇಟಿಯಿತ್ತ ವೇಳೆ ಮಹಿಳೆಯರು ದೇವರ ಮುಂದೆ ಗೋಳಾಡಿ, ತಾಯಿಗೆ ಪೂಜೆ-ಪುನಸ್ಕಾರ, ಅಭಿಷೇಕವಾಗಿ ಒಂದು ವರ್ಷ ಕಳೆದಿದೆ. ಕೇಳಿದ್ದನ್ನೆಲ್ಲಾ ನೀಡುತ್ತಿದ್ದ ರೋಗ-ರುಜಿನ ಪರಿಹರಿಸುತ್ತಿದ್ದ ತಾಯಿಯನ್ನು ಕಾಣಲು ಬಿಡಿ ಎಂದು ಸಚಿವರನ್ನು ಭಕ್ತರು ಒತ್ತಾಯಿಸಿದರು.

ಭಕ್ತರೆಲ್ಲಾ ಆಗಮಿಸಿ ನಿರಾಸೆ ಮುಖ ಹೊತ್ತು ತೆರಳುತ್ತಿದ್ದಾರೆ. ಬಾಯಿ ಬೀಗ, ಹರಕೆ ಬಲಿ, ಮುಡಿ ಹರಕೆಗಳನ್ನು ತೀರಿಸಲಾಗದೇ ಕಾಯುತ್ತಿದ್ದಾರೆ. ಅಮ್ಮನ ಪೂಜೆ ನಡೆದರೆ ಸಾಕೆಂಬಂತಾಗಿದ್ದು, ದೇಗುಲದ ಬಾಗಿಲು ತೆಗೆದರೆ ಇಡೀ ಊರಿಗೆ ಒಳ್ಳೆಯದಾಗುತ್ತದೆ. ಮಕ್ಕಳಿಗೆ ಹೆಸರಿಡದೆ ಹಲವರು ಕಾಯುತ್ತಿದ್ದಾರೆಂದು ಗ್ರಾಮದ ಬೊಂಬಮ್ಮ ಹೇಳಿದರು.ಈ ಬಗ್ಗೆ ಶೀಘ್ರ ಕ್ರಮಕೊಳ್ಳುವುದಾಗಿ ಸಚಿವರ ಭರವಸೆ : ಈಗಾಗಲೇ ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಅರ್ಚಕರೊಬ್ಬರನ್ನು ನೇಮಿಸಿ ಶೀಘ್ರವೇ ಪೂಜೆ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಸುರೇಶ್​ ಕುಮಾರ್​ ತಿಳಿಸಿದರು.


ವರದಿ :- ಗೂಳಿಪುರ ನಂದೀಶ ಅಮ್ಮ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.