ರಾಜ್ಯ

ಕಾಂಗ್ರೆಸ್ ಧುರೀಣ, ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಬುಧವಾರ ನಸುಕಿನ ಜಾವ ನಿಧನಹೊಂದಿದ್ದಾರೆ.

ಕಾಂಗ್ರೆಸ್ ಧುರೀಣ, ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ನಿಧನ
ಶಂಕರ ಮುನವಳ್ಳಿ
Published On :

ಬೆಳಗಾವಿ: ಅನಾರೋಗ್ಯದಿಂದ ಬಳಲುತ್ತಿದ್ದ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಬುಧವಾರ ನಸುಕಿನ ಜಾವ ನಿಧನಹೊಂದಿದ್ದಾರೆ. 

ಕೆಲಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ಶಂಕರ ಮುನವಳ್ಳಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ನಿಷ್ಠಾವಂತ ಸೇವೆ ಸಲ್ಲಿಸಿದ್ದ ಅವರು ಪಕ್ಷದಲ್ಲಿ ಅನ್ಯಾಯವಾದಾಗ ತಮ್ಮದೇ ಪಕ್ಷದ ನಾಯಕರನ್ನು ಬಹಿರಂಗವಾಗಿ ಟೀಕಿಸಿ ಗಮನಸೆಳೆಯುತ್ತಿದ್ದರು. ಸಾಕಷ್ಟು ಕಾನೂನು ತಿಳುವಳಿಕೆ ಹೊಂದಿದ್ದ ಶಂಕರ ಮುನವಳ್ಳಿ ತಮ್ಮ ಹರಿತವಾದ ಮಾತುಗಳಿಂದ ಅನೇಕ ರಾಜಕೀಯ ನಾಯಕರ ನಿದ್ದೆಗೆಡಿಸಿದ್ದರು.

ಹುಬ್ಬಳ್ಳಿ ಈದ್ಗಾ ಮೈದಾನದ ರಾಷ್ಟ್ರಧ್ವಜಾರೋಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಕೆಸ್ ಸಂಬಂಧ ಆಗಮಿಸುತ್ತಿದ್ದ ಆಗಿನ ಮಧ್ಯಪ್ರದೇಶದ ಮುಖ್ಯಮಂತ್ರಿ ಉಮಾಭಾರತಿ ಸೇರಿದಂತೆ ಕಾರ್ಯಕರ್ತರಿಂದ ರಾಷ್ಟ್ರ ಧ್ವಜ ಕ್ಕೆ ಅವಮಾನವಾಗಿತ್ತು. ಆಗ ಅದನ್ನು ಬಹಿರಂಗಗೊಳಿಸಿ ರಾಷ್ಟ್ರದ ಗಮನಸೆಳೆದಿದ್ದರು.

ಎಂಭತ್ತರ ದಶಕದ ಆರಂಭದಲ್ಲಿ ದಿ.ಎ.ಕೆ.ಸುಬ್ಬಯ್ಯ  ಅವರು ,ಬಿಜೆಪಿ ಯಿಂದ ಉಚ್ಛಾಟಿಸಲ್ಪಟ್ಟ ನಂತರ,ಕಟ್ಟಿದ ” ಕನ್ನಡ ನಾಡು” ಪ್ರಾದೇಶಿಕ ಪಕ್ಷದಲ್ಲಿ ಗುರುತಿಸಿಕೊಂಡ ಶಂಕರ ಮುನವಳ್ಳಿ  ನಂತರ ಕಾಂಗ್ರೆಸ್ ಪಕ್ಷದತ್ತ ಮುಖಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.