ರಾಜ್ಯ

ಶಿಕ್ಷಣ ಸಚಿವರ ಭೇಟಿ ದಿನವೇ ಶಾಲೆಗೆ ಬೀಗ ಜಡಿದ ಪಾಲಕರು!

ಮುಖ್ಯ ಶಿಕ್ಷಕರಾಗಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡದ ಬಾಲು ನಾಯ್ಕ್​ ಅವರು ನಿಯೋಜನೆಯಾಗಿರುವ ಅಂಬಿಕಾಪುರಕ್ಕೆ ಹೋಗುವ ತನಕ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದು ಶಾಲೆಗೆ ಬೀಗ ಜಡಿದಿದ್ದಾರೆ.

ಶಿಕ್ಷಣ ಸಚಿವರ ಭೇಟಿ ದಿನವೇ ಶಾಲೆಗೆ ಬೀಗ ಜಡಿದ ಪಾಲಕರು!
ಶಿಕ್ಷಣ ಸಚಿವರ ಭೇಟಿ ದಿನವೇ ಶಾಲೆಗೆ ಬೀಗ ಜಡಿದ ಪಾಲಕರು!
Published On :

ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನ.18 ರಂದು ಕಾಡಂಚಿನ ಗ್ರಾಮವಾದ ಗೋಪಿನಾಥಂ ಶಾಲೆಯಲ್ಲಿ ವಾಸ್ತವ್ಯ ಹೂಡಲು ಆಗಮಿಸುತ್ತಿದ್ದಾರೆ. ಆದರೆ, ಮೀಣ್ಯಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಾಲಕರು ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. 

ಶಿಕ್ಷಣ ಸಚಿವರ ಭೇಟಿ ದಿನವೇ ಶಾಲೆಗೆ ಬೀಗ ಜಡಿದ ಪಾಲಕರು... ಯಾಕಂತಿರಾ!? ಹೌದು, ಶಾಲೆಯ ಮುಖ್ಯಶಿಕ್ಷಕ ಬಾಲು ನಾಯ್ಕ ಎಂಬುವರು ಸೆಪ್ಟಂಬರ್​ ನಲ್ಲೇ ಬೇರೆ ಶಾಲೆಗೆ ನಿಯೋಜನೆಯಾಗಿದ್ದರೂ ತೆರಳದೇ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕರಾಗಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡದ ಬಾಲು ನಾಯ್ಕ್​ ಅವರು ನಿಯೋಜನೆಯಾಗಿರುವ ಅಂಬಿಕಾಪುರಕ್ಕೆ ಹೋಗುವ ತನಕ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ. 

ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಪೋಷಕರುಇನ್ನು ಪಾಲಕರ ಪ್ರತಿಭಟನೆಗೆ ಮಕ್ಕಳು ಕೂಡ ಕೈಜೋಡಿಸಿದ್ದು, ತಮಗೆ ಬೇರೆ ಮುಖ್ಯಶಿಕ್ಷಕರನ್ನು ನಿಯೋಜಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಮಂಗಳವಾರ ಶಿಕ್ಷಣ ಸಚಿವರಿಗೆ ಮನವಿ ಪತ್ರ ನೀಡುವುದಾಗಿ ವಿದ್ಯಾರ್ಥಿಗಳ ಪಾಲಕರು ತಿಳಿಸಿದ್ದಾರೆ.

ವರದಿ: ಗೂಳಿಪುರ ನಂದೀಶ ಎಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.