ಕಲಬುರಗಿ: ಕಣ್ಮುಂದೆಯೇ ಮುಳುಗುತ್ತಿದ್ದರು ನೋಡುತ್ತಿದ್ದ ಸ್ನೇಹಿತರು, ವಿಡಿಯೋ ವೈರಲ್!
ಯುವಕನೋರ್ವ ಸ್ನೇಹಿತರ ಜೊತೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ್ದ. ಈಜಾಡುತ್ತಿದ್ದವನ ಕೈ ಸೋತ್ತಿದ್ದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಆದರೆ ಪಕ್ಕದಲ್ಲೇ ಇದ್ದ ಸ್ನೇಹಿತರು ಮಾತ್ರ ಹುಡುಗಾಟ ಎಂದು ಭಾವಿಸಿ ವಿಡಿಯೋ ಮಾಡಿದ್ದಾರೆ.

ಕಲಬುರಗಿ: ಯುವಕನೋರ್ವ ಸ್ನೇಹಿತರ ಜೊತೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ್ದ. ಈಜಾಡುತ್ತಿದ್ದವನ ಕೈ ಸೋತ್ತಿದ್ದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಆದರೆ ಪಕ್ಕದಲ್ಲೇ ಇದ್ದ ಸ್ನೇಹಿತರು ಮಾತ್ರ ಹುಡುಗಾಟ ಎಂದು ಭಾವಿಸಿ ವಿಡಿಯೋ ಮಾಡಿದ್ದಾರೆ.
ಮಿಜುಗುರಿ ಬಡಾವಣೆಯ 22 ವರ್ಷದ ಜಾಫರ್ ಅಯೂಬ್ ಮೃತ ಯುವಕ. ಕುಕ್ಮೋದ್ದೀನ್ ಕಲ್ಲಿನ ಕ್ವಾರಿಯಲ್ಲಿ ಈ ಘಟನೆ ನಡೆದಿದೆ.
ನೀರಿಗೆ ಜಿಗಿದು ಆರಾಮವಾಗಿ ಈಜುತ್ತಿದ್ದ. ಆದರೆ ಕೆಲವೊತ್ತಿನಲ್ಲೇ ಜಾಫರ್ ಕೈಗಳು ಸೋತಿವೆ. ದಡಕ್ಕೆ ಬಂದರು ಹಿಡಿದುಕೊಳ್ಳಲಾಗದೆ ಮತ್ತೆ ನೀರಿನಲ್ಲಿ ಮುಳುಗಿದ್ದಾನೆ. ಅಲ್ಲೇ ಇದ್ದ ಸ್ನೇಹಿತನೊಬ್ಬ ಜಾಫರ್ ನೀರಿನಲ್ಲಿ ಆಟವಾಡುತ್ತಿರಬೇಕು ಎಂದು ಭಾವಿಸಿ ನೋಡುತ್ತಾ ನಿಂತಿದ್ದಾನೆ. ಆದರೆ ಎರಡು ಮೂರು ಬಾರಿ ಮೇಲಕ್ಕೆ ಬಂದ ಜಾಫರ್ ಕೊನೆಗೆ ಮುಳುಗಿದ್ದಾನೆ.
ಸ್ನೇಹಿತರು ಇದನ್ನು ವಿಡಿಯೋ ಮಾಡುತ್ತಿದ್ದರೇ ಹೊರತು ಆತನಿಗೆ ಏನಾಗುತ್ತಿದೆ ಎಂದು ನೋಡಲಿಲ್ಲ. ಸದ್ಯ ಯುವಕ ಮುಳುಗುತ್ತಿರುವ ವಿಡಿಯೋ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


