ಹಂಪಿ: ಬ್ಯಾಟರಿ ಚಾಲಿತ ವಾಹನ ಪಲ್ಟಿ ಪ್ರಕರಣ, ರಸ್ತೆ ಕಾಮಗಾರಿಗೆ ಅವಕಾಶ ಕೊಟ್ಟ ಭಾರತೀಯ ಪುರಾತತ್ವ ಇಲಾಖೆ
ಕೆಟ್ಟ ಮೇಲೆ ಬುದ್ದಿ ಬಂತು, ನಮ್ಮ ವರದಿಯಿಂದ ಎಚ್ಚೆತ್ತು ಭಾರತೀಯ ಪುರಾತತ್ವ ಇಲಾಖೆ ರಸ್ತೆ ಕಾಮಗಾರಿಗೆ ಅವಕಾಶ ಕೊಟ್ಟಿದೆ.

ಹೊಸಪೇಟೆ: ಕೆಟ್ಟ ಮೇಲೆ ಬುದ್ದಿ ಬಂತು, ನಮ್ಮ ವರದಿಯಿಂದ ಎಚ್ಚೆತ್ತು ಭಾರತೀಯ ಪುರಾತತ್ವ ಇಲಾಖೆ ರಸ್ತೆ ಕಾಮಗಾರಿಗೆ ಅವಕಾಶ ಕೊಟ್ಟಿದೆ.
ನಿನ್ನೆ ವಿಶ್ವ ವಿಖ್ಯಾತ ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನ ಪಲ್ಟಿಯಾಗಿ ಆರು ಆಂದ್ರ ಮೂಲದ ಪ್ರವಾಸಿಗರಿಗೆ ಗಾಯಗೊಂಡಿದ್ದರು. ಘಟನೆ ನಂತರ ಎಚ್ಚೆತ್ತ ಎರಡು ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.
ಹಂಪಿಯ ವಿಜಯವಿಠ್ಠಲ ದೇವಸ್ಥಾನಕ್ಕೆ ಪ್ರವಾಸಿಗರನ್ನ ಕರೆದೊಯ್ಯೂತಿದ್ದಾಗ ಬ್ಯಾಟರಿ ಚಾಲಿತ ವಾಹನ ಪಲ್ಟಿಯಾಗಿತ್ತು.
ಅಪಘಾತಕ್ಕೆ ಎರಡು ಪ್ರಮುಖ ಕಾರಣಗಳಿತ್ತು. ಒಂದು ಕಿರಿದಾಗಿದ್ದ ರಸ್ತೆ ಮತ್ತೊಂದು ಬ್ಯಾಟರಿ ವಾಹನ ನಿರ್ವಹಣೆ ಇಲ್ಲದೆ ದುರಸ್ಥಿಗೆ ಬಂದಿದ್ದು, ಮೊದಲನೆ ಕಾರಣಕ್ಕೆ ಪರಿಹಾರ ಕಂಡು ಹಿಡಿದ ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆ ಕಿರಿದಾಗಿದ್ದ ಎತ್ತರದ ರಸ್ತೆಯನ್ನ ಕಡಿತಗೊಳಿಸಿ ರಸ್ತೆ ವಿಸ್ತರಣೆಗೆ ಮುಂದಾಗಿದೆ.
ಜೆಸಿಬಿ ಮೂಲಕ ತುರ್ತಾಗಿ ರಸ್ತೆ ವಿಸ್ತರ ಣೆಮಾಡುವ ಮೂಲಕ ಅವಘಡಕ್ಕೆ ಕಡಿವಾಣ ಹಾಕಬಹುದು.
ಇನ್ನು ಭಾರತೀಯ ಪುರಾತತ್ವ ಇಲಾಖೆಯ ಕಠಿಣ ನಿಯಮಗಳು ಇಲ್ಲಿನ ಅಭಿವೃದ್ದಿ ಕಾಮಗಾರಿಗಳಿಗೆ ಅಡ್ಡಿ ಆಗಿತ್ತು. ನಿನ್ನೆ ನಡೆದ ಘಟನೆಯಿಂದ ನಿಯಮ ಸಡಿಲಿಸಿ ರಸ್ತೆ ಕಾಮಗಾರಿಗೆ ಭಾರತೀಯ ಪುರಾತತ್ವ ಇಲಾಖೆ ಅನುಕೂಲ ಮಾಡಿಕೊಟ್ಟಿದೆ.
ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಒಪ್ಪಿಗೆ ಪಡೆದು ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರ ರಸ್ತೆ ಕಾಮಗಾರಿ ಪ್ರಾರಂಭಿಸಿದೆ. ಇದರ ಜೊತೆಗೆ ಹತ್ತು ಬ್ಯಾಟರಿ ಚಾಲಿತ ವಾಹನಗಳ ಖರೀದಿಗೆ ಪ್ರಾದಿಕಾರ ಮುಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


