ಗದಗದಲ್ಲೊಂದು 'ಮರ್ಯಾದಾ ಹತ್ಯೆ'-ಪ್ರೀತಿಸಿ ಮದುವೆಯಾಗಿದ್ದ ಪ್ರೇಮಿಗಳ ಬರ್ಬರ ಕೊಲೆ!
ಪೋಷಕರ ವಿರೋಧದ ನಡುವೆಯೂ ನೂರಾರು ಕನಸು ಕಟ್ಟಿಕೊಂಡು ಪ್ರೀತಿಸಿ ವಿವಾಹವಾಗಿದ್ದ ಯುವಜೋಡಿಯೊಂದು ರಕ್ತದ ಮಡುವಿನಲ್ಲಿ ಬರ್ಬರವಾಗಿ ಕೊಲೆಯಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಗದಗ: ಪೋಷಕರ ವಿರೋಧದ ನಡುವೆಯೂ ನೂರಾರು ಕನಸು ಕಟ್ಟಿಕೊಂಡು ಪ್ರೀತಿಸಿ ವಿವಾಹವಾಗಿದ್ದ ಯುವಜೋಡಿಯೊಂದು ರಕ್ತದ ಮಡುವಿನಲ್ಲಿ ಬರ್ಬರವಾಗಿ ಕೊಲೆಯಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗದ ಗಜೇಂದ್ರ ಗಡ ತಾಲೂಕು ಲಕ್ಕಲಹಟ್ಟಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ರಮೇಶ್ ಮಾದರ್ (29), ಗಂಗಮ್ಮ (23) ಎಂಬ ದಂಪತಿಗಳು ಹತ್ಯೆಗೀಡಾಗಿದ್ದಾರೆ. ಇಬ್ಬರ ಜಾತಿ ಬೇರೆ ಬೇರೆ ಎಂಬ ಕಾರಣಕ್ಕೆ ಪೋಷಕರಿಂದ ಈ ಪ್ರೇಮಿಗಳ ವಿವಾಹಕ್ಕೆ ವಿರೋಧವಿತ್ತು. ಆದರೆ ಅದಕ್ಕೆ ಸೊಪ್ಪು ಹಾಕದ ಈ ಜೋಡಿ ಎಲ್ಲವನ್ನೂ ಎದುರಿಸಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದರು. ಆದರೆ ಇದರಿಂದ ಆಕ್ರೋಶಗೊಂಡ ಗಂಗಮ್ಮ ಸಾಂಬಂಧಿಗಳು ಲಕ್ಕಲಹಟ್ಟಿ ಗ್ರಾಮಕ್ಕೆ ನುಗ್ಗಿ ನವದಂಪತಿಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಕಲ್ಲು ಹಾಗೂ ದೊಣ್ನೆಯನ್ನು ಬಳಸಿ ಯುವತಿ ಗಂಗಮ್ಮಳ ಸಂಬಂಧಿಗಳು ಈ ಕೃತ್ಯ ಎಸಗಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಗಜೇಂದ್ರಗಡ ಪೋಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಾದ ಶಿವಪ್ಪ, ರವಿ, ರಮೇಶ್ ಎಂಬುವವರನ್ನು ಈಗಾಗಲೇ ಬಂಧಿಸಿದ್ದು ಇನ್ನೊರ್ವ ಆರೋಪಿ ರಮೇಶ್ಗಾಗಿ ಶೋಧಕಾರ್ಯ ಮುಂದುವರಿದಿದೆ. ಮಗ, ಸೊಸೆಯನ್ನು ಕಳೆದುಕೊಂಡ ರಮೇಶ್ ಪೋಷಕರ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


