ಮಾತೃ ಭಾಷೆ ಕಣ್ಣಿದ್ದಂತೆ, ಅನ್ಯ ಭಾಷೆ ಕನ್ನಡಕದಂತೆ- ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಮಾತೃಭಾಷೆ ಎಂಬುದು ಕಣ್ಣಿದ್ದಂತೆ, ಬೇರೆ ಭಾಷೆಗಳು ಕನ್ನಡಕವಿದ್ದಂತೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತೃ ಭಾಷೆಗೆ ಜೈಕಾರ ಮೊಳಗಿಸಿದ್ದಾರೆ.

ಮಂಗಳೂರು: ಮಾತೃಭಾಷೆ ಎಂಬುದು ಕಣ್ಣಿದ್ದಂತೆ, ಬೇರೆ ಭಾಷೆಗಳು ಕನ್ನಡಕವಿದ್ದಂತೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತೃ ಭಾಷೆಗೆ ಜೈಕಾರ ಮೊಳಗಿಸಿದ್ದಾರೆ.
ನಗರದ ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ೧೭ನೆ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಾತೃ ಭಾಷೆಗೆ ಮನ್ನಣೆ ನೀಡುವಂತೆ ಕರೆ ನೀಡಿದರು.
ಮಾತೃಭಾಷೆಯನ್ನು ನಾವು ಯಾವತ್ತೂ ಮರೆಯಲೇ ಬಾರದು. ತಾಯ್ನಾಡಿನ ಮಾತೃಭಾಷೆ ನಮ್ಮನ್ನು ರಕ್ಷಿಸುವ ಹೆಮ್ಮೆಯ ಭಾಷೆ. ಹೀಗಾಗಿ ಮಾತೃಭಾಷೆಯಲ್ಲಿ ಮಾತನಾಡಲು ಯಾವತ್ತಿಗೂ ಹೆಮ್ಮೆಪಡಬೇಕು ಎಂದರು.
ಮಕ್ಕಳು ತಮ್ಮ ಸ್ಥಳೀಯ ಮಾತೃ ಭಾಷೆಯಲ್ಲೇ ಮಾತನಾಡಲು ಕಲಿಯಬೇಕು. ಸರ್ಕಾರ ಕೂಡ ಪ್ರೌಢಶಾಲೆಯವರೆಗೂ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಬೇಕು. ಹಾಗೆಂದ ಮಾತ್ರಕ್ಕೆ ತಾವು ಬೇರೆ ಭಾಷೆಗಳ ವಿರೋಧಿಯಲ್ಲ, ಆದರೆ, ಮಾತೃ ಭಾಷೆಗೆ ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


