ಆರ್ ಸಿಇಪಿ ಹಾಲು ಉತ್ಪಾದಕರ ಪಾಲಿನ ಮರಣ ಶಾಸನ: ಸಂಸದ ಡಿ.ಕೆ ಸುರೇಶ್
ಎಫ್ ಟಿ ಎ ಅಡಿಯಲ್ಲಿ ಬೇರೆ ದೇಶದ ಹಾಲು ಉತ್ಪನ್ನಗಳನ್ನು ಇತರೆ ದೇಶಗಳಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಆರ್ ಸಿಇಪಿ ಕಾಯ್ದೆಗೆ ಸಹಿ ಹಾಕುವುದು, ನಮ್ಮ ರಾಜ್ಯದ ರೈತರು ಹಾಗೂ ಹಾಲು ಉತ್ಪಾದಕರ...

ಬೆಂಗಳೂರು: ಎಫ್ ಟಿ ಎ ಅಡಿಯಲ್ಲಿ ಬೇರೆ ದೇಶದ ಹಾಲು ಉತ್ಪನ್ನಗಳನ್ನು ಇತರೆ ದೇಶಗಳಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಆರ್ ಸಿಇಪಿ ಕಾಯ್ದೆಗೆ ಸಹಿ ಹಾಕುವುದು, ನಮ್ಮ ರಾಜ್ಯದ ರೈತರು ಹಾಗೂ ಹಾಲು ಉತ್ಪಾದಕರ ಪಾಲಿನ ಮರಣ ಶಾಸನಕ್ಕೆ ಸಹಿ ಹಾಕಿದಂತೆ ಎಂದು ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಫ್ರೀಡಂ ಪಾರ್ಕ್ ನಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತರ ಜೀವನ ಮಟ್ಟವನ್ನು ಸುಧಾರಿಸುವ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇದೀಗ ರೈತರ ಆದಾಯದ ಮೂಲವಾದ ಹಾಲು ಉತ್ಪಾದನೆಗೆ ಪೆಟ್ಟು ನೀಡುವ ದುಷ್ಕೃತ್ಯಕ್ಕೆ ಕೈ ಇಟ್ಟಿದ್ದಾರೆ. ರೈತರೇ ಈ ದೇಶದ ಬೆನ್ನೆಲಬು ಎಂದು ಎಲ್ಲ ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಇದನ್ನು ನಂಬಿ ದೇಶದ ಶೇಕಡಾ 60 ರಷ್ಟು ಜನರು ಇಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಎಂದರು.
ದೇಶದಲ್ಲಿ ಆರ್ಥಿಕ ಹಿಂಜರಿತ ಇದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕತ್ತಿಲ್ಲ. ರೈತ ಸಮುದಾಯದ ಅಭಿವೃದ್ದಿಗೆ ಶ್ರಮಿಸಲಿದ್ದೇವೆ ಎನ್ನುವ ಭರವಸೆಯನ್ನು ನರೇಂದ್ರ ಮೋದಿ ಅವರು ನೀಡಿದ್ದರು. ಆದರೆ, ಈಗ ಈ ಕಾಯ್ದೆಗೆ ಸಹಿ ಹಾಕುವ ಮೂಲಕ ನೀವು ದೇಶದ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕಾರ್ಯಕ್ಕೆ ಮುಂದಾಗುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನವೆಂಬರ್ 4ರಂದು ಈ ಕಾಯ್ದೆಗೆ ಸಹಿ ಹಾಕುವ ಮೂಲಕ ವಿದೇಶದಲ್ಲಿ ನೀವು ಚಪ್ಪಾಳೆ ತಟ್ಟಿಸಿಕೊಳ್ಳಬಹುದು. ಆದರೆ ಮುಂದಿನ ದಿನಗಳಲ್ಲಿ ಈ ದೇಶದ ಜನರ ಸಿಟ್ಟಿಗೆ ಗುರಿಯಾಗುತ್ತೀರಿ ಎಂದು ಪ್ರಧಾನಿಗೆ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


