ತಾಳಗುಪ್ಪ-ಬೆಂಗಳೂರು ರೈಲ್ವೆ ಇಂಜಿನ್ ನಲ್ಲಿ ಬೆಂಕಿ: ಪ್ರಯಾಣಿಕರು ಪಾರು
ಮೈಸೂರು ಲೋಕೋಮೋಟಿವ್, ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ....

Published On :
ಶಿವಮೊಗ್ಗ: ಮೈಸೂರು ಲೋಕೋಮೋಟಿವ್, ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಕಾರಣ ರೈಲು ಸೋಮವಾರ ರಾತ್ರಿ ಭದ್ರಾವತಿ ನಿಲ್ದಾಣದಲ್ಲಿ ಸುಮಾರು ಎರಡು ಗಂಟೆಗಳಿಗೆ ಹೆಚ್ಚು ಕಾಲ ನಿಂತಿರುವ ಘಟನೆ ವರದಿಯಾಗಿದೆ ರೈಲು ಸಂಖ್ಯೆ - 16228 ನ ಇಂಜಿನ್ ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿದ್ದಾಗಿ ಹೇಳಲಾಗಿದೆ.
ರಾತ್ರಿ 11ಕ್ಕೆ ಶಿವಮೊಗ್ಗದಿಂದ ಹೊರಟಿದ್ದ ರೈಲು ಭದ್ರಾವತಿಗೆ ತಲುಪುವಾಗ ಬೆಂಕಿ ಕಾಣಿಸಿದೆ.ತಕ್ಷಣ ಎಚ್ಚೆತ್ತ ರೈಲ್ವೆ ಇಲಾಖೆ ಅಗ್ನಿಶಾಮಕದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದೆ.
ಬೆಂಕಿ ಹತ್ತಿದ್ದ ಇಂಜಿನ್ ಬದಲಿಸಿ ಬೇರೆ ಇಂಜಿನ್ ಅಳವಡಿಸಿದ ನಂತರ ರೈಲು ರಾತ್ರಿ 1.40ಕ್ಕೆ ಭದ್ರಾವತಿಯಿಂದ ಬೆಂಗಳೂರಿನತ್ತ ಹೊರಟಿದೆ.
ಘಟನೆಯಲ್ಲಿ ಯಾವ ಪ್ರಯಾಣಿಕರಿಗೂ ಗಾಯಗಳಾಗಿಲ್ಲ, ಯಾವುದೇ ಸಾವು ನೋವು ಸಂಭವಿಸಿಲ್ಲ.
ಬೆಂಕಿ ಆಕಸ್ಮಿಕವಾದ ಕಾರಣ ಸುಮಾರು ಎರಡೂ ವರೆ ಗಂಟೆಗಳ ಕಾಲ ತಡವಾಗಿ ರೈಲು ಬೆಂಗಳುರು ತಲುಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


