ರಾಜ್ಯ

ಪ್ರೀತಿಯೇ ವಿಷವಾಯ್ತು! ಪ್ರಿಯತಮೆ ತಂದುಕೊಟ್ಟ ವಿಷ ಸೇವಿಸಿ ಪ್ರೇಮಿ ಆತ್ಮಹತ್ಯೆ

ತನ್ನ ಪ್ರಿಯತಮೆಯೇ ನನಗೆ ವಿಷ ಕೊಟ್ಟಳು ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.

ಪ್ರೀತಿಯೇ ವಿಷವಾಯ್ತು! ಪ್ರಿಯತಮೆ ತಂದುಕೊಟ್ಟ ವಿಷ ಸೇವಿಸಿ ಪ್ರೇಮಿ ಆತ್ಮಹತ್ಯೆ
ಸಂಗ್ರಹ ಚಿತ್ರ
Published On :
ಮೈಸೂರು: ತನ್ನ ಪ್ರಿಯತಮೆಯೇ ನನಗೆ ವಿಷ ಕೊಟ್ಟಳು ಎಂದು ಸೆಲ್ಫಿ ವೀಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡಿನ ಕಸುವಿನಹಳ್ಳಿ ಗ್ರಾಮ ನಿವಾಸಿ ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ.ಈತ ಬೆಳವಾಡಿಯ ಬೇಕರಿಯೊಂದರಲ್ಲಿ ಕೆಲಸ ,ಮಾಡುವವನಾಗಿದ್ದು ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಘಟನೆ ವಿವರ
ಸಿದ್ದರಾಜು ಬೆಳವಾಡಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು ಆಕೆಯ ಪೋಷಕರು ಈ ಇಬ್ಬರ ಪ್ರೀತಿಗೆ ಒಪ್ಪಿರಲಿಲ್ಲ. ಅಲ್ಲದೆ ಯುವತಿ ಸಹ ಇತ್ತೀಚೆಗೆ ಆತನಿಂದ ದೂರಾಗಿ ಪೋಷಕರು ತೋರೊಸೊದ್ದ ಇನ್ನೊಬ್ಬ ಯುವಕನೊಡನೆ ಮದುವೆಗೆ ಸಿದ್ದವಾಗಿದ್ದಳು.
ಇದರಿಂದ ಸಿದ್ದರಾಜು ಮನನೊಂದಿದ್ದನು. ಇದೀಗ ತ್ಮಹತ್ಯೆ ಮಾಡಿಕೊಂಡಿರುವ ಸಿದ್ದರಾಜು ತಾನು ಸಾಯುವ ಮುನ್ನ ಸೆಲ್ಫಿ ವೀಡಿಯೋ ಮಾಡಿಟ್ಟು ಹೋಗಿದ್ದಾನೆ. ಆ ವೀಡಿಯೋದಲ್ಲಿರುವಂತೆ "ತನ್ನ ಪ್ರಿಯತಮೆಯೇ ನನಗೆ ವಿಷ ತಂದು ಕೊಟ್ಟು ಕುಡಿಯುವಂತೆ ಹೇಳಿದಳು. ಅಲ್ಲದೆ ತನ್ನ ಸಾವಿಗೆ ತಾನೇ ಕಾರಣವೆಂದು ಡೆತ್ ನೋಟ್ ಬರೆದಿಡುವಂತೆಯೂ ಹೇಳಿದ್ದಳು. ಎಂದು ವಿವರಿಸಿದ್ದಾನೆ. ಅಲ್ಲದೆ ತಾನು ಬರೆದ ಡೆತ್ ನೋಟ್ ಹಾಗೂ ಆಕೆ ತಂದಿದ್ದಳೆನ್ನಲಾದ ವಿಷದ ಬಾಟಲ್ ಸಹ ಪ್ರದರ್ಶಿಸಿದ್ದಾನೆ.
"ನನ್ನನ್ನು ಪ್ರೀತಿಸಿ ವಂಚಿಸಿದ ಆ ಯುವತಿ ಮದುವೆಯಾಗಬಾರದು, ಆಕೆ, ಆಕೆಯ ತಾಯಿ ಹಾಗೂ ಅಜ್ಜಿಯೇ ನನ್ನ ಸಾವಿಗೆ ನೇರ ಕಾರಣವಾಗಿದ್ದು ಆವರನ್ನೆಲ್ಲಾ ಜೈಲಿಗೆ ಹಾಕಬೇಕು" ಎಂದು ಯುವಕ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಘಟನೆ ಕುರಿತಂತೆ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.