ಉಡುಪಿ: ಸಾಲಬಾಧೆಯಿಂದ ಬೇಸತ್ತು ಮೀನುಗಾರನ ಆತ್ಮಹತ್ಯೆ
ಹಣಕಾಸು ಸಂಸ್ಥೆಗಳಿಂದ ಪಡೆದಿದ್ದ ಸಾಲ ತೀರಿಸಲು ಸಾಧ್ಯವಾಗದೆ ಮೀನುಗಾರನೊಬ್ಬ ಆತ್ಮಹತ್ಯೆಗೊಳಗಾಗಿರುವ ಘಟನೆ ಕುಂದಾಪುರ ತಾಲೊಕು ಗಂಗೊಳ್ಳಿ ಸಮೀಪದ ಹೊಸಾಡು ನಲ್ಲಿ ನಡೆದಿದೆ.

Published On :
ಉಡುಪಿ: ಹಣಕಾಸು ಸಂಸ್ಥೆಗಳಿಂದ ಪಡೆದಿದ್ದ ಸಾಲ ತೀರಿಸಲು ಸಾಧ್ಯವಾಗದೆ ಮೀನುಗಾರನೊಬ್ಬ ಆತ್ಮಹತ್ಯೆಗೊಳಗಾಗಿರುವ ಘಟನೆ ಕುಂದಾಪುರ ತಾಲೊಕು ಗಂಗೊಳ್ಳಿ ಸಮೀಪದ ಹೊಸಾಡು ನಲ್ಲಿ ನಡೆದಿದೆ.
ಸುಬ್ರಾಯ ಖಾರ್ವಿ (40) ಎಂಬುವವರೇ ಮೃತ ದುದೈವಿ. ಕಳೆದ ಕೆಲವು ದಿನಗಳಿಂದ ಮೀನುಗಾರಿಕೆ ಕಸುಬು ನಷ್ಟ ಉಂಟುಮಾಡಿದ ಕಾರಣ ಖಾರ್ವಿ ತೀವ್ರ ಖಿನ್ನತೆಗೊಳಗಾಗಿದ್ದರು ಎಂದು ಕುಟುಂಬ ಮೂಲಗಳು ಹೇಳಿವೆ.
ಅನಾರೋಗ್ಯದ ಕಾರಣ ಇತ್ತೀಚಿಗೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


