ಆರ್ ಟಿಐ ಅಡಿಯಲ್ಲಿ ಮಾಹಿತಿ ನೀಡದಿದ್ದಕ್ಕೆ ತಹಸೀಲ್ದಾರ್ ಗೆ 30 ಸಾವಿರ ದಂಡ
ಆರ್ ಟಿಐ ಅಡಿಯಲ್ಲಿ ಮಾಹಿತಿ ನೀಡದಿದ್ದಕ್ಕೆ ತಹಸೀಲ್ದಾರ್ ಒಬ್ಬರಿಗೆ ರಾಜ್ಯ ಮಾಹಿತಿ ಆಯುಕ್ತರು 30 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

Published On :
ಬೆಂಗಳೂರು: ಆರ್ ಟಿಐ ಅಡಿಯಲ್ಲಿ ಮಾಹಿತಿ ನೀಡದಿದ್ದಕ್ಕೆ ತಹಸೀಲ್ದಾರ್ ಒಬ್ಬರಿಗೆ ರಾಜ್ಯ ಮಾಹಿತಿ ಆಯುಕ್ತರು 30 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
73 ವರ್ಷದ ಮಾಜಿ ರಣಜಿ ಟ್ರೋಫಿ ಕ್ರಿಕೆಟ್ ಆಟಗಾರ ವಿಶ್ವನಾಥ್ ಮೊದಲು ಅಮಾಯಕರಂತೆ ಮಾಹಿತಿ ಕೇಳಿದ್ದಾಗ ನೀಡಿರಲಿಲ್ಲ. ಆದರೆ, 2016ರಲ್ಲಿ ರಾಜ್ಯ ಮಾಹಿತಿ ಆಯೋಗವನ್ನು ಕೋರಿದ ನಂತರ ಅಂತಿಮವಾಗಿ ಮಾಹಿತಿ ನೀಡದ ತಹಸೀಲ್ದಾರ್ ಗೆ ದಂಡ ವಿಧಿಸಲಾಗಿದೆ.
ತಹಸೀಲ್ದಾರ್ ನಾಗೇಶ್ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೆಚ್ ವಿ ಸತ್ಯನಾರಾಯಣ ಅವರಿಗೆ ಮಾಹಿತಿ ಆಯೋಗ ನೋಟಿಸ್ ಜಾರಿ ನೀಡಿದ್ದು, ವಿಚಾರಣೆಗೆ ಸತ್ಯನಾರಾಯಣ್ ಹಾಜರಾದರೆ ನಾಗೇಶ್ ಗೈರಾಗಿದ್ದರು. ವಿಶ್ವನಾಥ್ ಕೇಳಿದ್ದ 2006ರಿಂದ 2007ರವರೆಗಿನ ಮಾಹಿತಿಯನ್ನು ನೀಡಲು ಸಂಬಂಧಿತ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ತಹಸೀಲ್ದಾರ್ ನಾಗೇಶ್ ಅವರಿಗೆ ಮೂರು ದೂರುಗಳಿಗೆ ಸಂಬಂಧಿಸಿದಂತೆ ತಲಾ 10 ಸಾವಿರದಂತೆ 30 ಸಾವಿರ ದಂಡ ವಿಧಿಸಿದ್ದು, ಪ್ರತಿತಿಂಗಳು 5 ಸಾವಿರ ಸಂಬಳವನ್ನು ಕಡಿತಗೊಳಿಸುವಂತೆ ಕಂದಾಯ ಇಲಾಖೆಗೆ ರಾಜ್ಯ ಮಾಹಿತಿ ಆಯುಕ್ತ ಎಸ್.ಎಲ್. ಪಾಟೀಲ್ ಆದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


