ಬೆಳಗಾವಿ: ಮೇ 1 ರಿಂದ ಮೊದಲ ಉಡಾನ್ ವಿಮಾನಯಾನ ಆರಂಭ
ಹಲವು ದಿನಗಳ ನಂತರ ಉಡಾಣ್ -3 ಯೋಜನೆಯಡಿ ಹೈದ್ರಾಬಾದ್ - ಬೆಳಗಾವಿ ನಡುವಣ ಮೊದಲ ವಿಮಾನಯಾನ ಮೇ 1 ರಿಂದ ಆರಂಭವಾಗಲಿದೆ.

ಬೆಳಗಾವಿ: ಹಲವು ದಿನಗಳ ನಂತರ ಉಡಾಣ್ -3 ಯೋಜನೆಯಡಿ ಹೈದ್ರಾಬಾದ್ - ಬೆಳಗಾವಿ ನಡುವಣ ಮೊದಲ ವಿಮಾನಯಾನ ಮೇ 1 ರಿಂದ ಆರಂಭವಾಗಲಿದೆ.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಹೈದ್ರಾಬಾದ್ ಹಾಗೂ ಬೆಳಗಾವಿ ನಡುವೆ ಸ್ಪೈಸ್ ಜೆಟ್ ವಿಮಾನ ಹಾರಾಟ ಆರಂಭಿಸುತ್ತಿದೆ. ಈ ವಿಮಾನ ಉಭಯ ನಗರಗಳ ನಡುವೆ ಪ್ರತಿನಿತ್ಯ ಕಾರ್ಯಾಚರಣೆ ನಡೆಸಲಿದೆ.
ಮೂಲಗಳ ಪ್ರಕಾರ, ಎಸ್ ಜಿ -3734 ವಿಮಾನ ವಾರದ ಎಲ್ಲಾ ದಿನಗಳಲ್ಲಿ ಸಂಜೆ 5.55 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ನಿರ್ಗಮಿಸಲಿದ್ದು, 7-10 ಕ್ಕೆ ಹೈದ್ರಾಬಾದ್ ತಲುಪಲಿದೆ. ಎಸ್ ಜಿ 3733 ವಿಮಾನ ಸಂಜೆ 4.10 ಕ್ಕೆ ಹೈದ್ರಾಬಾದ್ ನಿರ್ಗಮಿಸಲಿದ್ದು, ಸಂಜೆ 5.35ಕ್ಕೆ ಬೆಳಗಾವಿಗೆ ಆಗಮಿಸಲಿದೆ.
ಒಂದು ಕಡೆಯ ಸಂಚರಕ್ಕಾಗಿ ಕನಿಷ್ಠ ವಿಮಾನ ಪ್ರಯಾಣ ದರ 2. 714 ರೂಪಾಯಿಯನ್ನು ಸ್ಪೈಸ್ ಜೆಟ್ ಕಂಪನಿ ನಿಗದಿಪಡಿಸಿದ್ದು, ಮೊದಲ ಉಡಾಣ್ ವಿಮಾನ ಪ್ರಯಾಣದ ಬುಕ್ಕಿಂಗ್ ಆರಂಭವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


