ರಾಜ್ಯ

ನೆಲಮಂಗಲ ಬಳಿ ಭೀಕರ ಅಪಘಾತ: ಐರಾವತ ಬಸ್ -ಸ್ಕಾರ್ಪಿಯೋ ಡಿಕ್ಕಿ; ಒಂದೇ ಕುಟುಂಬದ ಐವರ ದುರ್ಮರಣ

ಸರ್ಕಾರಿ ಬಸ್‌ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾ. ಜಿಲ್ಲೆಯ ನೆಲಮಂಗಲದ ಯಂಟಗಾನಹಳ್ಳಿ ...

ನೆಲಮಂಗಲ ಬಳಿ ಭೀಕರ ಅಪಘಾತ: ಐರಾವತ ಬಸ್ -ಸ್ಕಾರ್ಪಿಯೋ ಡಿಕ್ಕಿ; ಒಂದೇ ಕುಟುಂಬದ ಐವರ ದುರ್ಮರಣ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಸರ್ಕಾರಿ ಬಸ್‌ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾ. ಜಿಲ್ಲೆಯ ನೆಲಮಂಗಲದ ಯಂಟಗಾನಹಳ್ಳಿ ಬಸ್​ನಿಲ್ದಾಣದ ಸಮೀಪ ಅಪಘಾತ ಸಂಭವಿಸಿದ್ದು, ಬಸ್‌ಗೆ​ ಡಿಕ್ಕಿಯಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾತ್ರಿ 10:20ಕ್ಕೆ 32 ಪ್ರಯಾಣಿಕರೊಂದಿಗೆ ಮಣಿಪಾಲ್ ಗೆ  ಕೆಎಸ್ ಆರ್ ಟಿಸಿ ಐರಾವತ ಬಸ್ ಹೊರಟಿತ್ತು. ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಅತಿ ವೇಗವಾಗಿ ಬಂಡ ಸ್ಕಾರ್ಪಿಯೋ ಕಾರು ಡಿವೈಡರ್  ಡಿಕ್ಕಿ ಹೊಡೆಗು ನಂತರ  ಬಸ್ ಗೆ ಗುದ್ದಿದೆ.
ಬೆಂಗಳೂರಿನ ನಾಯಂಡಹಳ್ಳಿಯ ಪಂತರಪಾಳ್ಯದವರಾದ ಸ್ಕಾರ್ಪಿಯೋ ಚಾಲಕ ಏಳುಮಲೈ(36), ಗೀತಾ(10), ಕಮಲಾ(35), ಕಿರಣ್(13), ಗಿರಿಧರ್(14) ಮೃತರು. ಬಸ್​ನಲ್ಲಿದ್ದ ಕೆಲವರಿಗೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರಿಗೆ ನೆಲಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ನೆಲಮಂಗಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.