ರಾಜ್ಯ

ಯಕ್ಷ ದಿಗ್ಗಜ ಜಲವಳ್ಳಿ ವೆಂಕಟೇಶ ರಾವ್ ನಿಧನ

ಪ್ರಸಿದ್ಧ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಯಕ್ಷ ದಿಗ್ಗಜ ಜಲವಳ್ಳಿ ವೆಂಕಟೇಶ ರಾವ್ ನಿಧನ
ವೆಂಕಟೇಶ್ ರಾವ್
Published On :

ಹೊನ್ನಾವರ: ಪ್ರಸಿದ್ಧ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಯಕ್ಷಗಾನ ರಂಗದಲ್ಲಿ ತನ್ನದೇ ಆದ ಗತ್ತು ಗೈರತ್ತಿನಿಂದ ತೆಂಕು ತಿಟ್ಟು, ಬಡಗುತಿಟ್ಟಿನ ಅಗ್ರಮಾನ್ಯ ಕಲಾವಿದರಾಗಿದ್ದ ಇವರು  ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬುದು ತಿಳಿದುಬಂದಿದೆ.

ತನ್ನ ಅತ್ಯದ್ಬುತ ಕಂಠದಿಂದ ಹಲವು ಪಾತ್ರಗಳಿಗೆ ಜೀವ ತುಂಬಿದ್ದ ಜಲವಳ್ಳಿಯವರು ನಾಟ್ಯಕ್ಕೆ ಅಷ್ಟೇನು ಪ್ರಾಮುಖ್ಯ ನೀಡದಿದ್ದರೂ ಗತ್ತು ಮತ್ತು ಗೈರತ್ತಿನ ದೊರೆಯಾಗಿ ಕಾಣಿಸಿಕೊಂಡಿದ್ದರು.

ತೆಂಕು ತಿಟ್ಟಿನ ಸುರತ್ಕಲ್ , ಬಡಗಿನ ಗುಂಡಬಾಳ, ಇಡಗುಂಡಿ ಮತ್ತಿತರ ಮೇಳದಲ್ಲಿ 24 ವರ್ಷ ತಿರುಗಾಟ ಮಾಡಿದ್ದ  ಜಲವಳ್ಳಿ ಅವರು ಸಾಲಿಗ್ರಾಮ ಮೇಳದಲ್ಲಿ ಸುಧೀರ್ಘ 24 ವರ್ಷ ತಿರುಗಾಟ ಮಾಡಿ ಪ್ರಧಾನ ವೇಷಧಾರಿಯಾಗಿ ಖ್ಯಾತಿಯ ಉತ್ತುಂಗಕ್ಕೇರಿದ್ದರು.ಶನೀಶ್ವರ ಮಹಾತ್ಮೆಯ ಶನಿ, ರಾವಣ, ಭೀಮ, ಈಶ್ವರ, ಸುದರ್ಶನ ಮೊದಲಾದ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು.

ದಿವಗಂಗ ಕಾಳಿಂಗ ನಾವಡರ ಪ್ರೀತಿ ಪಾತ್ರ ಕಲಾವಿದರಾಗಿದ್ದ ವೆಂಕಟೇಶ ರಾಯರು , ದಿವಂಗತ ಪದ್ಮಶ್ರೀ  ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೊಂದಿಗೆ ಜೋಡಿ  ಪಾತ್ರಗಳಲ್ಲಿ ಮಿಂಚಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.