ವಿದ್ವಾನ್ ಟಿ.ಪಿ. ವೈದ್ಯನಾಥನ್ ನಿಧನ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೈಸೂರು ಪರಂಪರೆಯ ಹೆಸರಾಂತ ಗಾಯಕ ವಿದ್ವಾನ್ ಟಿ.ಪಿ. ವೈದ್ಯನಾಥನ್(85) ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Published On :
ಮೈಸೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೈಸೂರು ಪರಂಪರೆಯ ಹೆಸರಾಂತ ಗಾಯಕ ವಿದ್ವಾನ್ ಟಿ.ಪಿ. ವೈದ್ಯನಾಥನ್(85) ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1934ರಲ್ಲಿ ಜನಿಸಿದ ವೈದ್ಯನಾಥನ್, ತಮ್ಮ ಬಾಲ್ಯದಲ್ಲಿಯೇ ಸಂಗೀತದತ್ತ ಆಕರ್ಷಿತರಾದರು. ಮೈಸೂರು ವಾಸುದೇವಾಚಾರ್ಯ ವಂಶಸ್ಥರಾದ ಇವರು, ವಿದ್ವಾನ್ ಬಿ.ಕೆ. ಪದ್ಮನಾಭ ಅವರ ಬಳಿ ಸಂಗೀತ ಅಭ್ಯಾಸ ಆರಂಭಿಸಿದರು.
ಸಂಗೀತ ಕಚೇರಿ ನೀಡುವ ಮೂಲಕ ಹಿಡಿತ ಸಾಧಿಸಿದ ಇವರು, ತಮ್ಮ 16ನೇ ವಯಸ್ಸಿಗೆ ಎಐಆರ್ ಕಲಾವಿದರಾಗಿ ಗುರುತಿಸಿಕೊಂಡರು. ಬಳಿಕ ಚೆನ್ನೈಗೆ ತೆರೆಳಿದ ಅವರು, ಕೆಲ ಕಾಲ ಅಲ್ಲಿಯೇ ಇದ್ದು ಸಂಗೀತ ಸೇವೆ ಮಾಡಿದರು.
2005ರಲ್ಲಿ ಮೈಸೂರಿಗೆ ಮರಳಿದ ಅವರು, ಕೊನೆಯ ಉಸಿರಿರುವವರೆಗೂ ಸಂಗೀತ ಸೇವೆ ಮಾಡಿದರು. ಚೆನ್ನೈನಲ್ಲಿ ಕಲಾಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.
ತಮ್ಮ ಗಳಿಕೆಯ ಬಹುಭಾಗವನ್ನು ಸಂಗೀತ ಸಭೆಗಳಿಗೆ ನೀಡಿರುವ ಅವರು, ತಮ್ಮ ದೇಹವನ್ನು ದಾನ ಮಾಡಿದ್ದಾರೆ ಎಂದು ಕುಟುಂಬಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


