ಚಿಕ್ಕಮಗಳೂರು: ಜ್ಯೋತಿಷಿ ಮಾತು ಕೇಳಿ 45 ದಿನದ ಕಂದಮ್ಮನನ್ನೇ ಕೊಂದ ಕಟುಕ ತಂದೆ!
ಈ ಹೆಣ್ಣು ಮಗು ನಿನ್ನ ಭವಿಷ್ಯಕ್ಕೆ ಕಂಟಕವಾಗುತ್ತೆ ಎಂದು ಹೇಳಿದ ಜ್ಯೋತಿಷಿಯ ಮಾತು ಕೇಳಿ ಕಟುಕ ತಂದೆ 45 ದಿನದ ತನ್ನ ಕಂದಮ್ಮನ ಕತ್ತು ಹಿಸುಕಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ...

Published On :
ಚಿಕ್ಕಮಗಳೂರು: ಈ ಹೆಣ್ಣು ಮಗು ನಿನ್ನ ಭವಿಷ್ಯಕ್ಕೆ ಕಂಟಕವಾಗುತ್ತೆ ಎಂದು ಹೇಳಿದ ಜ್ಯೋತಿಷಿಯ ಮಾತು ಕೇಳಿ ಕಟುಕ ತಂದೆ 45 ದಿನದ ತನ್ನ ಕಂದಮ್ಮನ ಕತ್ತು ಹಿಸುಕಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಬೂಚೇನಹಳ್ಳಿ ಕಾವಲ್ ನಲ್ಲಿ 27 ವರ್ಷದ ಮಂಜುನಾಥ್ ಎಂಬಾತ ನವಜಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿದ್ದಾನೆ. ಜ್ಯೋತಿಷಿ ಈ ಹೆಣ್ಣು ಮಗು ನಿನ್ನ ಭವಿಷ್ಯಕ್ಕೆ ಕಂಟಕ ಎಂದು ಹೇಳಿದ್ದರಿಂದ ಈ ಮಾತನ್ನು ನಂಬಿ ಆತ ತನ್ನ ಮಗುವಿನ ಕತ್ತು ಹಿಸುಕಿ ಸಾಯಿಸಿದ್ದಾನೆ.
ಮಗುವನ್ನು ಕೊಂದ ಆರೋಪದ ಮೇಲೆ ಸದ್ಯ ಕಟುಕ ತಂದೆಯನ್ನು ಪೊಲೀಸರು ಬಂಧಿಸಿದ್ದು ಮಗುವಿನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಮಗುವಿನ ಸಾವಿಗೆ ಕಾರಣನಾದ ಜ್ಯೋತಿಷಿ ಸದ್ಯ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


