ಆಧಾರ್ ಜೋಡಣೆ ಕಡ್ಡಾಯ, ಸಾಲ ಮನ್ನಾ ಸಾಪ್ಟ್ ವೇರ್ ನಿಂದ ಸರ್ಕಾರಕ್ಕೆ 5,500 ಕೋಟಿ ಹಣ ಉಳಿತಾಯ
ಆಧಾರ್ ಜೋಡಣೆ ಕಡ್ಡಾಯ ಹಾಗೂ ಬೆಳೆ ಸಾಲ ಮನ್ನಾ ವ್ಯವಸ್ಥೆ ಸಾಪ್ಟ್ ವೇರ್ ಅಭಿವೃದ್ಧಿಯೊಂದಿಗೆ ರೈತರ ಸಾಲಮನ್ನಾ ಯೋಜನೆ ಅನುಷ್ಠಾನದಿಂದ 5, 500 ಕೋಟಿ ತೆರಿಗೆದಾರರ ಹಣ ಉಳಿಯವ ಸಾಧ್ಯತೆ ಇದೆ.

Published On :
ಬೆಂಗಳೂರು: ಆಧಾರ್ ಜೋಡಣೆ ಕಡ್ಡಾಯ ಹಾಗೂ ಬೆಳೆ ಸಾಲ ಮನ್ನಾ ವ್ಯವಸ್ಥೆ ಸಾಪ್ಟ್ ವೇರ್ ಅಭಿವೃದ್ಧಿಯೊಂದಿಗೆ ರೈತರ ಸಾಲಮನ್ನಾ ಯೋಜನೆ ಅನುಷ್ಠಾನದಿಂದ 5, 500 ಕೋಟಿ ತೆರಿಗೆದಾರರ ಹಣ ಉಳಿಯವ ಸಾಧ್ಯತೆ ಇದೆ.
ಬ್ಯಾಂಕ್ ಖಾತೆ, ಪಡಿತರ ಚೀಟಿ ಹಾಗೂ ಭೂ ಕಂದಾಯ ದಾಖಲೆಗಳಿಗೆ ಆಧಾರ್ ಜೋಡಣೆ ಕಡ್ಡಾಯ ಹಾಗೂ ಸಾಲ ಮನ್ನಾ ಸಾಪ್ಟ್ ವೇರ್ ನಿಂದಾಗಿ ಸ್ವ ಘೋಷಿತ ರೈತರ ಪರಿಶೀಲನಾ ಪ್ರಕ್ರಿಯೆ ಹಾಗೂ ಬ್ಯಾಂಕ್ ಗಳಿಂದ ಸರಿಯಾದ ರೀತಿಯಲ್ಲಿ ಆಡಿಟ್ ನಡೆಯುತ್ತಿದ್ದು, ಸುಮಾರು 7.8 ಲಕ್ಷ ಪ್ರಕರಣಗಳಲ್ಲಿ ತಪ್ಪು ಮಾಹಿತಿಯನ್ನು ಪತ್ತೆ ಹಚ್ಚಲು ನೆರವಾಗಿದೆ.
ಜೂನ್ ಹಾಗೂ ಜುಲೈ ತಿಂಗಳೊಳಗೆ ಒಂದೇ ಕಂತಿನಲ್ಲಿ ವಾಣಿಜ್ಯ ಬ್ಯಾಂಕು ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಲು ಸರ್ಕಾರ ಮುಂದಾಗಿದ್ದು, ಮೊದಲ ಬಾರಿಗೆ ವಾಣಿಜ್ಯ ಬ್ಯಾಂಕುಗಳಲ್ಲಿ 22 ಲಕ್ಷ ಸಾಲದಾರರ ಖಾತೆಗಳು ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ 19 ಲಕ್ಷ ಸಾಲದಾರರ ಖಾತೆಗಳ ಪಟ್ಟಿಯನ್ನು ಕಳುಹಿಸಲಾಗಿತ್ತು. ಆದರೆ, ಪರಿಶೀಲನೆ ನಂತರ ವಾಣಿಜ್ಯ ಬ್ಯಾಂಕುಗಳಲ್ಲಿ 16. 3 ಲಕ್ಷ ಹಾಗೂ ಸಹಕಾರಿ ಬ್ಯಾಂಕು ಗಳಲ್ಲಿ 12. 1 ಲಕ್ಷ ಬ್ಯಾಂಕ್ ಖಾತೆದಾರರು ಮಾತ್ರ ಅರ್ಹ ಫಲಾನುಭವಿಗಳು ಎಂಬುದನ್ನು ಪತ್ತೆ ಹಚ್ಚಲಾಗಿದೆ.
ಸಾಲಮನ್ನಾ ಯೋಜನೆಗಾಗಿ ಸಲ್ಲಿಸಲಾಗಿರುವ ದಾಖಲಾತಿಗಳ ಪರಿಶೀಲನೆಯಲ್ಲಿ 1.9 ಲಕ್ಷ ರೈತರು ತಪ್ಪು ಮಾಹಿತಿ ನೀಡಿರುವುದು ಕಂಡುಬಂದಿದೆ. ಗ್ರಾಮ ಲೆಕ್ಕಿಗರು ಮನೆಮನೆಗೂ ತೆರಳಿ ಪರಿಶೀಲನೆ ನಡೆಸಿದ್ದು, 1.9 ಲಕ್ಷ ರೈತರು ತಪ್ಪು ಮಾಹಿತಿ ನೀಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೇ, ಆಧಾರ್ ಜೋಡಣೆ ಕಡ್ಡಾಯ ಹಾಗೂ ಬೆಳೆ ಸಾಲ ಮನ್ನಾ ವ್ಯವಸ್ಥೆ ಸಾಪ್ಟ್ ವೇರ್ ಅಭಿವೃದ್ಧಿಯೊಂದಿಗೆ ರೈತರ ಸಾಲಮನ್ನಾ ಯೋಜನೆ ಅನುಷ್ಠಾನದಿಂದ 5, 500 ಕೋಟಿ ತೆರಿಗೆದಾರರ ಹಣ ಉಳಿಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bengaluruಆಧಾರ್Aadhaarloan waiver SoftwareSave Public Money ಬೆಂಗಳೂರುಸಾಲ ಮನ್ನಾ ಸಾಪ್ಟ್ ವೇರ್ಸಾರ್ವಜನಿಕ ಹಣ ಉಳಿತಾಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


