ರಾಜ್ಯ

ಧಾರವಾಡ: ಪುತ್ರ ಅಭಿಷೇಕ್ ಜೊತೆ ಹಾಲು, ತುಪ್ಪ ತುಲಾಭಾರ ಸೇವೆ ಸಲ್ಲಿಸಿದ ಸುಮಲತಾ ಅಂಬರೀಷ್

ಇಲ್ಲಿನ ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ ಮಂಡ್ಯ ಕ್ಷೇತ್ರದ ...

ಧಾರವಾಡ: ಪುತ್ರ ಅಭಿಷೇಕ್ ಜೊತೆ ಹಾಲು, ತುಪ್ಪ ತುಲಾಭಾರ ಸೇವೆ ಸಲ್ಲಿಸಿದ ಸುಮಲತಾ ಅಂಬರೀಷ್
ತುಲಾಭಾರ ಸೇವೆ ಸಲ್ಲಿಸಿದ ಸುಮಲತಾ ಅಂಬರೀಷ್ ಮತ್ತು ಅಭಿಷೇಕ್
Published On :
ಧಾರವಾಡ: ಇಲ್ಲಿನ ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಮತ್ತು ಅವರ ಪುತ್ರ ಅಭಿಷೇಕ್ ಹಾಲು ಮತ್ತು ತುಪ್ಪದ ತುಲಾಭಾರ ಸೇವೆ ಸಲ್ಲಿಸಿದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಮತ್ತು ಅಭಿಷೇಕ್ ಅವರ ಅಮರ್ ಚಿತ್ರದ ಗೆಲುವಿಗಾಗಿ ಅವರ ಅಭಿಮಾನಿಗಳು ತುಲಾಭಾರ ಸೇವೆ ಹಮ್ಮಿಕೊಂಡಿದ್ದರು. ಅಭಿಷೇಕ್ ಅವರು 100 ಕೆಜಿ ಸಕ್ಕರೆ, 15 ಕೆಜಿ ತುಪ್ಪ ಮತ್ತು ಸುಮಲತಾ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪದ ತುಲಾಭಾರ ಸೇವೆ ಸಲ್ಲಿಸಿದರು.
ತುಲಾಭಾರ ಸೇವೆ ಮತ್ತು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ನಾವು ಇದೇ ಮೊದಲ ಬಾರಿಗೆ ತುಲಾಭಾರ ಸೇವೆಯಲ್ಲಿ ಭಾಗವಹಿಸುತ್ತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಹಲವರು ಹರಕೆ ಹೊತ್ತುಕೊಂಡಿದ್ದರು. ಏಳು ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡಕ್ಕೆ ಬಂದಿದ್ದೆ. ಈಗ ಮತ್ತೆ ಬರುವ ಅವಕಾಶ ಸಿಕ್ಕಿದೆ. ಇಂದು ಕಾಲೇಜುಗಳಿಗೆ ಭೇಟಿ ಹಾಗೂ ಇತರ ಕೆಲವು ನಿಗದಿತ ಕಾರ್ಯಕ್ರಮಗಳಿವೆ ಎಂದರು.
ಅಂಬರೀಷ್ ಅಭಿಮಾನಿ ಉದ್ಯಮಿ ನಾರಾಯಣ ಕುಲಾಲ್ ತುಲಾಭಾರ ಆಯೋಜಿಸಿದ್ದರು. ದೇವಸ್ಥಾನದ ಪಾರುಪತ್ತೆದಾರ ಪಿ ಆರ್ ದೇಸಾಯಿ ಪೂಜೆ ನೆರವೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.