ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಕನ್ನಡ ವಿರೋಧಿ: ಎಸ್ ಜಿ ಸಿದ್ದರಾಮಯ್ಯ
ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವು ಕನ್ನಡದ ಅಭಿವೃದ್ಧಿಗೆ ವಿರುದ್ಧವಾಗಿದೆ ಎಂದು ಕನ್ನಡ ಅಭಿವೃದ್ಧಿಯ ಪ್ರಾಧಿಕಾರ (ಕೆಎಸ್ಎ) ಅಧ್ಯಕ್ಷ....

Published On :
ಮೈಸೂರು: ಸರ್ಕಾರಿ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವು ಕನ್ನಡದ ಅಭಿವೃದ್ಧಿಗೆ ವಿರುದ್ಧವಾಗಿದೆ ಎಂದು ಕನ್ನಡ ಅಭಿವೃದ್ಧಿಯ ಪ್ರಾಧಿಕಾರ (ಕೆಎಸ್ಎ) ಅಧ್ಯಕ್ಷ ಎಸ್. ಜಿ. ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಉಪಕ್ರಮವನ್ನು :ಕನ್ನಡ ವಿರೋಧಿ" ಎಂದು ಕರೆದ ಅವರು ಪ್ರಾಥಮಿಕ ಶಿಕ್ಷಣವನ್ನು ಇಂಗ್ಲಿಷ್ ಮಾದ್ಯಮದಲ್ಲಿ ನೀಡುವ ಕ್ರಮವು ಪ್ರಾಥಮಿಕ ಶಿಕ್ಷಣದ ಉದ್ದೇಶವನ್ನೇ ಹಾಳುಮಾಡುತ್ತದೆ, ಭವಿಷ್ಯದಲ್ಲಿ ಮಕ್ಕಳ ಉನ್ನತ ಶಿಕ್ಷಣದ ಮೇಲೆ ಇದು ಪರಿಣಾಮ ಮಾಡುತ್ತದೆ. ಕುವೆಂಪು, ಸಿ.ಎನ್.ಆರ್. ರಾವ್ ಮತ್ತು ಯು.ಆರ್. ರಾವ್ ಸೇರಿದಂತೆ ಹಲವು ಮಂದಿ ಕನ್ನಡ ಮಾದ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದು ಜಾಗತಿಕ ಮಟ್ಟದಲ್ಲಿ ಹೆಸರಾಗಿದ್ದಾರೆ" ಅವರು ಹೇಳಿದ್ದಾರೆ.
\
ಪ್ರಸ್ತಾಪಿತ ತ್ರಿಭಾಷಾ ಸೂತ್ರದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮೊದಲ ಮತ್ತು ಎರಡನೆಯ ಭಾಷೆಗಳಾಗಿದ್ದರೆ ಸ್ಥಳೀಯ ಭಾಷೆಗಳು ಸಾಂಕೇತಿಕವಾಗಿರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತ್ರಿಭಾಷಾ ನೀತಿಯ ವಿರುದ್ಧ ಕುವೆಂಪು ಮಾತನ್ನು ಉಲ್ಲೇಖಿಸಿ ಎಚ್ಚರಿಸಿದ ಸಿದ್ದರಾಮಯ್ಯ ಜರ್ಮನ್, ಜಪಾನೀಸ್ ಮತ್ತು ಸಂಸ್ಕೃತವನ್ನು ಮೂರನೆಯ ಭಾಷೆಯಾಗಿ ಕಲಿಸುವ ಖಾಸಗಿ ಸಂಸ್ಥೆಗಳು ಶಿಕ್ಷಣವನ್ನು ವಾಣಿಜ್ಯೀಕರಣ ಮಾಡಿ ಕನ್ನಡಕ್ಕೆ ಬೆದರಿಕೆ ಹಾಕಿವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Kannada Development Authorityಇಂಗ್ಲಿಷ್ಕನ್ನಡ ಅಭಿವೃದ್ಧಿ ಪ್ರಾಧಿಕಾರS G SiddaramaiahEnglish medium govt schoolsಎಸ್. ಜಿ. ಸಿದ್ದರಾಮಯ್ಯಆದ್ಯಮ ಸರ್ಕಾರಿ ಶಾಲೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


