ರಾಜ್ಯ

ಸ್ನೇಹಿತರಿಗೆ ಪತ್ನಿಯ ಬೆತ್ತಲೆ ಫೋಟೋ ಕಳುಹಿಸಿ ವರದಕ್ಷಿಣೆಗಾಗಿ ಬ್ಲ್ಯಾಕ್ ಮೇಲ್!

ತನ್ನ ಸ್ನೇಹಿತರಿಗೆ ಪತ್ನಿಯ ಬೆತ್ತಲೆ ಚಿತ್ರವನ್ನು ಕಳುಹಿಸಿ ವರದಕ್ಷಿಣೆಗಾಗಿ ಬೆದರಿಕೆ ಹಾಕುತ್ತಿದ್ದ ಪತಿಯ ...

ಸ್ನೇಹಿತರಿಗೆ ಪತ್ನಿಯ ಬೆತ್ತಲೆ ಫೋಟೋ ಕಳುಹಿಸಿ ವರದಕ್ಷಿಣೆಗಾಗಿ ಬ್ಲ್ಯಾಕ್ ಮೇಲ್!
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ತನ್ನ ಸ್ನೇಹಿತರಿಗೆ ಪತ್ನಿಯ ಬೆತ್ತಲೆ ಫೋಟೋ ಕಳುಹಿಸಿ ವರದಕ್ಷಿಣೆಗಾಗಿ ಬೆದರಿಕೆ ಹಾಕುತ್ತಿದ್ದ ಪತಿಯ ವಿರುದ್ಧ 29 ವರ್ಷದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ.
ಬೃಂದಾವನನಗರ ನಿವಾಸಿ ಸುಷ್ಮಾ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ರಾಜೇಶ್ (34ವ) ಮತ್ತು ಅತ್ತೆ-ಬಾವನ ವಿರುದ್ಧ ದೂರು ನೀಡಿದ್ದಾರೆ.
ಮಹಿಳೆ ದೂರಿನಲ್ಲಿ ಹೇಳಿದ್ದೇನು:2010ರಲ್ಲಿ ತನಗೂ, ರಾಜೇಶ್ ಗೂ ಮದುವೆಯಾಗಿತ್ತು. ತನ್ನ ಪೋಷಕರು ರಾಜೇಶ್ ಗೆ ಎರಡೂವರೆ ಲಕ್ಷ ರೂಪಾಯಿ ವರದಕ್ಷಿಣೆ ಮತ್ತು 150 ಗ್ರಾಂ ಚಿನ್ನವನ್ನು ನೀಡಿದ್ದರು. ರಾಜೇಶ್ ಸುಷ್ಮಾ ಮನೆಯಲ್ಲಿಯೇ ಮದುವೆಯಾದ ಮೊದಲೆರಡು ವರ್ಷ ವಾಸಿಸುತ್ತಿದ್ದು ಹೆಣ್ಣು ಮಗು ಹುಟ್ಟಿದ ಮೇಲೆ ಬೃಂದಾವನ ನಗರಕ್ಕೆ ಮನೆ ಬದಲಾಯಿಸಿದರು. ರಾಜೇಶ್ ನ ತಾಯಿ ಮತ್ತು ಸೋದರ ಕೂಡ ಜೊತೆಯಲ್ಲಿದ್ದರು.
ಮದ್ಯ ವ್ಯಸನಿಯಾಗಿದ್ದ ರಾಜೇಶ್ ತನ್ನ ಪುಟ್ಟ ಮಗು ಕೂಡ ಸಿಗರೇಟು ಸೇದುವಂತೆ ಮತ್ತು ಆಲ್ಕೋಹಾಲ್ ಕುಡಿಯುವಂತೆ ಒತ್ತಾಯಿಸುತ್ತಿದ್ದ. ಸ್ನೇಹಿತರ ಜೊತೆ ಮನೆಯಲ್ಲಿ ಪಾರ್ಟಿ ನಡೆಸುತ್ತಿದ್ದ. ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ತವರು ಮನೆಯಿಂದ ಇನ್ನಷ್ಟು ಹಣ ತರುವಂತೆ ಪೀಡಿಸುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಸುಷ್ಮಾ ತಾಯಿ ಮನೆಯವರು ಸುಮಾರು 4 ಲಕ್ಷ ರೂಪಾಯಿ ನೀಡಿದ್ದರು. ಈ ಸಂದರ್ಭದಲ್ಲಿ ಬೇರೆ ಮಹಿಳೆಯರೊಂದಿಗೆ ರಾಜೇಶ್ ಗೆ ಸ್ನೇಹವಿರುವುದು ಸುಷ್ಮಾಗೆ ಗೊತ್ತಾಗಿತ್ತು. ಈ ಬಗ್ಗೆ ಸುಷ್ಮಾ ಪ್ರಶ್ನಿಸಿದಾಗ ಜಗಳ, ಸಮಸ್ಯೆಗಳು ಮನೆಯಲ್ಲಿ ಆರಂಭವಾಗಲು ಶುರುವಾಯಿತು. ಆಕೆಗೆ ಚೆನ್ನಾಗಿ ಹೊಡೆದು ರಾಜೇಶ್ ತಾಯಿ ಮನೆಯಿಂದ ಇನ್ನಷ್ಟು ದುಡ್ಡು ತರುವಂತೆ ಪೀಡಿಸುತ್ತಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.