ಐಎಂಎ ಹಗರಣ: ಎದೆನೋವು ಎಂದ ಮನ್ಸೂರ್ ಖಾನ್ ಗೆ ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ
ಬಹು ಕೋಟಿ ಐಎಂಎ ಹಗರಣದ ಮುಖ ಆರೋಪಿ ಮನ್ಸೂರ್ ಖಾನ್ ನನ್ನು ಜುಲೈ 21 ರಂದು ಎದೆ ನೋವು ಮತ್ತುಹೃದಯಬಡಿತದ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಲಾಗಿದೆ

Published On :
ಬೆಂಗಳೂರು: ಬಹು ಕೋಟಿ ಐಎಂಎ ಹಗರಣದ ಮುಖ ಆರೋಪಿ ಮನ್ಸೂರ್ ಖಾನ್ ನನ್ನು ಜುಲೈ 21 ರಂದು ಎದೆ ನೋವು ಮತ್ತುಹೃದಯಬಡಿತದ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಲಾಗಿದೆ.
ಮನ್ಸೂರ್ ಕಾನ್ ನನ್ನು ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಗೆ ಕರೆದೊಯ್ಯಲಾಯಿತು. ಸಂಸ್ಥೆಯ ನಿರ್ದೇಶಕ ಸಿ ಎನ್ ಮಂಜುನಾಥ್ ಅವರ ಪ್ರಕಾರ, ಆತಂಕ ಮತ್ತು ಒತ್ತಡವು ಅವರ ಆರೋಗ್ಯದ ಏರುಪೇರಿಗೆ ಕಾರಣವಾಗಿದೆ.
ಜುಲೈ 20 ರಂದು ವಿಶೇಷ ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಖಾನ್ ನನ್ನು ಜಾರಿ ನಿರ್ದೇಶನಾಲಯ (ಇಡಿ) ಮೂರು ದಿನಗಳ ಕಾಲ ವಶಕ್ಕೆ ಪಡೆದಿತ್ತು.
ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾಗ ಎದೆ ನೋವು ಉಂಟಾಗುತ್ತಿದೆ ಎಂದು ಮನ್ಸೂರ್ ಹೇಳಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದ್ದಾರೆ.
ಇಸಿಜಿ ಸೇರಿದಂತೆ ಹಲವು ತಪಾಸಣೆ ನಡೆಸಲಾಗಿದೆ. ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐ ಮಾನಿಟರಿ ಅಡ್ವೈಸರಿ (ಐಎಂಎ) ಮಾಲೀಕ ಹಾಗೂ ಸಂಸ್ಥಾಪಕ, ಮನ್ಸೂರ್ ಖಾನ್ ಸಾವಿರಾರು ಕೋಟಿ ರು. ವಂಚಿಸಿದ್ದ ಪ್ರಕರಣದಲ್ಲಿ ಖಾನ್ ವಿರುದ್ಧ ಹಲವಾರು ದೂರುಗಳು ದಾಖಲಾದ ನಂತರ ಕಳೆದ ತಿಂಗಳು ಭಾರತದಿಂದ ಪರಾರಿಯಾಗಿದ್ದನು. ಅದಾಗಿ ಇತ್ತೀಚೆಗೆ ಭಾರತಕ್ಕೆ ಹಿಂತಿರುಗಿದ್ದ ಖಾನ್ ಅನ್ನು ಇಡಿ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Enforcement Directorateಜಾರಿ ನಿರ್ದೇಶನಾಲಯC N ManjunathMansoor Khanಮನ್ಸೂರ್ ಖಾನ್ಐಎಂಎ ಹಗರಣIMA Ponzi scamಸಿ ಎನ್ ಮಂಜುನಾಥ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


