ಮಂಗಳೂರು: ನಿಷೇಧಿತ ಸ್ಥಳದಲ್ಲಿ ಈಜಲು ತೆರಳಿದ ಯುವಕರು ಸಮುದ್ರಪಾಲು
ನಿಷೇಧವಿದ್ದರೂ ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಮಂಗಳೂರು ಸಮೀಪದ ಸಸಿಹಿತ್ಲುವಿನಲ್ಲಿ ನಡೆದಿದೆ.

Published On :
ಮಂಗಳೂರು: ನಿಷೇಧವಿದ್ದರೂ ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಮಂಗಳೂರು ಸಮೀಪದ ಸಸಿಹಿತ್ಲುವಿನಲ್ಲಿ ನಡೆದಿದೆ.
ಕಾವೂರಿನ ಗುರುಪ್ರಸಾದ್ (28) ಹಾಗೂ ಬಜ್ಪೆ ಗ್ರಾಮದ ನಿವಾಸಿ ಸುಜಿತ್ (32) ಮೃತ ದುರ್ದೈವಿಗಳು ಇವರೊಡನೆ ಈಜಲು ತೆರಳಿದ್ದ ಇನ್ನಿಬ್ಬರು ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮೃತ ಸುಚಿತ್ ಮಂಗಳೂರಿನಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದರೆ, ಗುರುಪ್ರಸಾದ್ ಕಾವೂರಿನಲ್ಲಿ ಕೆಲಸದಲ್ಲಿದ್ದನು.
ಬಜ್ಪೆ ಮೂಲದ ಸೃಜನ್ ಹಾಗೂ ಕಾಂರ್ತಿಕ್ ಎಂಬುವವರನ್ನು ರಕ್ಷಣೆ ಮಾಡಲಾಗಿದ್ದು ಇದರಲ್ಲಿ ಸೃಜನ್ ತೀವ್ರ ಅಸ್ವಸ್ಥರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಹಿತ್ಲುವಿನ ಅಗ್ಗದ ಕಳಿಯ ಎಂಬಲ್ಲಿ ಭಾನುವಾರ ಕೆಸರುಗದ್ದೆ ಕ್ರೀಡೋತ್ಸವ ಇದ್ದ ಕಾರಣ ಅದರಲ್ಲಿ ಭಗವಹಿಸಲು ಈ ಯುವಕರು ಆಗಮಿಸಿದ್ದರು. ಹಗ್ಗಜಗ್ಗಾಟ ಸ್ಪರ್ಧೆಗೆ ಬಜಪೆ ಯುವ ಟೈಗರ್ ತಂಡದ 7ಮಂದಿ ಆಗಮಿಸಿದ್ದು ಮೊದಲ ಸುತಿನಲ್ಲೇ ಸೋಲನುಭವಿಸಿದ್ದ ಯುವಕರು ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಸ್ಥಳೀಯರು ಹಲವು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದರೂ ಗಮನಿಸದೆ ಸಮುದ್ರಕ್ಕಿಳಿದು ಅಪಾಯಕ್ಕೆ ಸಿಕ್ಕಿದ್ದಾರೆ.
ಯುವಕರು ಸಮುದ್ರಪಾಲಾಗುತ್ತಿದ್ದದ್ದನ್ನು ಗಮನಿಸಿದ ಪುಟ್ಟ ಮಗುವೊಂದು ಬೊಬ್ಬೆ ಹಾಕಿದ್ದು ಇದನ್ನು ಗಮನಿಸಿದ ಸ್ಥಳೀಯ ಗಂಗಾಂಧರ ಪುತ್ರನ್ ಸಾಹಸ ಮಾಡಿ ಇಬ್ಬರನ್ನು ರಕ್ಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


