ಬಾಗಲಕೋಟೆ: ನಿಷೇಧಿತ ನೊಟುಗಳ ವಿನಿಮಯ ನಡೆಸುತ್ತಿದ್ದ 7 ಜನರ ಬಂಧನ
ಹಳೆಯ ನಿಷೇಧಿತ ನೋಟನ್ನು ಕಮಿಷನ್ ಪಡೆದು ಹೊಸ ಕರೆನ್ಸಿ ನೋಟುಗಳಿಗೆ ಬದಲಾಯಿಸಿಕೊಡುವ ದಂಧೆಯಲ್ಲಿ ನಿರತವಾಗಿದ್ದ ಎಂಟು ಜನರ ಗ್ಯಾಂಗ್ ಅನ್ನು ಬಾಗಲಕೋಟೆ ಪೋಲೀಸರು ಪತ್ತೆಹಚ್ಚಿದ್ದಾರೆ.

Published On :
ಬಾಗಲಕೋಟೆ: ಹಳೆಯ ನಿಷೇಧಿತ ನೋಟನ್ನು ಕಮಿಷನ್ ಪಡೆದು ಹೊಸ ಕರೆನ್ಸಿ ನೋಟುಗಳಿಗೆ ಬದಲಾಯಿಸಿಕೊಡುವ ದಂಧೆಯಲ್ಲಿ ನಿರತವಾಗಿದ್ದ ಎಂಟು ಜನರ ಗ್ಯಾಂಗ್ ಅನ್ನು ಬಾಗಲಕೋಟೆ ಪೋಲೀಸರು ಪತ್ತೆಹಚ್ಚಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಗ್ಯಾಂಗ್ ನ ಏಳು ಜನರನ್ನು ಸೆರೆ ಹಿಡಿರಿರುವ ಪೋಲೀಸರು ಕಿಂಗ್ ಪಿನ್ ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.
ಬಂಧಿತರಿಂದ 29.4 ಲಕ್ಷ ರೂ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ 22.25 ಲಕ್ಷ ರು. 1,000 ರೂನೋಟುಗಳಿದ್ದರೆ ಉಳಿದದ್ದು 500 ರು. ನೋಟಾಗಿತ್ತು.
ಖಚಿತ ಮಾಹಿತಿ ಪಡೆದ ಪೋಲೀಸರು ಮಹಲಿಂಗಪುರ ಪಟ್ಟಣದ ಮನೆಯೊಂದಕ್ಕೆ ದಾಳಿ ನಡೆಸಿ ಏಳು ಜನರನ್ನು ಬಂಧಿಸಲು ಯಶಸ್ವಿಯಾದರು.ಬಂಧಿತರನ್ನು ಶಾಂತಪ್ಪಎನ್, ಗಣಪತಿ ಎಂ.ಕೃಷ್ಣ ಪಿ., ಬಸವರಾಜ ಎಚ್., ಹುಸೇನಬ್ಬ ಎಂ., ಮುಮ್ತಾಜ್ ಪಟೇಲ್ ಹಾಗೂ ಸಂಗೀತಾ ಎಂದು ಗುರುತಿಸಲಾಗಿದೆ.
ಮಹಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳಗಾವಿಯ ವ್ಯಕ್ತಿ ಇವರೆಲ್ಲರ ನಾಯಕನಾಗಿದ್ದನೆನ್ನುವುದು ಪ್ರಾಥಮಿಕ ತನಿಖೆ ವೇಳೆ ಬಹಿರಂಗವಾಗಿದ್ದು ಆತನ ಹುಡುಕಾಟ ಮುಂದುವರಿದಿದೆ.:
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


