ಮೈಸೂರು ಎಸ್ ಪಿ ವಿರುದ್ಧ ಪ್ರಕರಣ ದಾಖಲಿಸಿಲು ಐಜಿಪಿ ಅನುಮತಿ ಕೋರಿದ ಪೊಲೀಸ್ ಇನ್ಸ್ ಪೆಕ್ಟರ್
ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ವಿರುದ್ಧ ದೂರು ದಾಖಲಿಸಲು ಪೊಲೀಸ್ ಇನ್ಸ್ ಪೆಕ್ಟರ್ ಐಜಿಪಿ ಅವರ ಅನುಮತಿ ಕೋರಿದ್ದಾರೆ. ಇದೇ ಮೊದಲ ಬಾರಿಗೆ .,..

Published On :
ಮಂಡ್ಯ: ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ವಿರುದ್ಧ ದೂರು ದಾಖಲಿಸಲು ಪೊಲೀಸ್ ಇನ್ಸ್ ಪೆಕ್ಟರ್ ಐಜಿಪಿ ಅವರ ಅನುಮತಿ ಕೋರಿದ್ದಾರೆ. ಇದೇ ಮೊದಲ ಬಾರಿಗೆ ಅಧೀನ ಅಧಿಕಾರಿಯೊಬ್ಬರು ತಮ್ಮ ಮೇಲಧಿಕಾರಿ ವಿರುದ್ಧ ಕಾನೂನು ಹೋರಾಟ ಮಾಡಲು ಮುಂದಾಗಿದ್ದಾರೆ.
ಜನವರಿ 15 ರಂದು ಎಸ್ ಪಿ ಅಮಿತ್ ಸಿಂಗ್ ನನ್ನನ್ನು ಮತ್ತು ನನ್ನ ಪೋಷಕರ ವಿರುದ್ಧ ತುಚ್ಛ ಮಾತುಗಳಿಂದ ನಿಂದಿಸಿದ್ದಾರೆ. ಇದರಿಂದ ನನ್ನ ಕುಟುಂಬಸ್ಥರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ, ಅವರಿಗೆ ಅವಮಾನವಾಗಿದೆ, ನನ್ನ ತಾಯಿಯ ಭಾವನೆಗಳಿಗೆ ನೋವಾಗಿದೆ, ಇದನ್ನೆಲ್ಲಾ ವಿದ್ಯುನ್ಮಾನ ಮಾಧ್ಯಮಗಳು ಬಿತ್ತರಿಸಿದ್ದು ನನ್ನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ, ಹೀಗಾಗಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲು ಅನುಮತಿ ಕೋರುತ್ತಿರುವುದಾಗಿ ಇನ್ಸ್ ಪೆಕ್ಟರ್ ರವಿ ದಕ್ಷಮಿ ವಲಯ ಐಜಿ ಕೆ,ವಿ ಶರತ್ ಚಂದ್ರ ಅವರಿಗೆ ಪತ್ರ ಬರೆದಿದ್ದಾರೆ.
ಸದ್ಯ ನಾನು ಹಾಸನದಲ್ಲಿದ್ದೇನೆ, ಒಂದು ವೇಳೆ ನನ್ನ ಕಚೇರಿಗೆ ಪುತ್ರ ತಲುಪಿದ್ದರೇ ವಾಪಸ್ ಮೈಸೂರಿಗೆ ಆಗಮಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಐಜಿಪಿ ಕೆ.ವಿ ಶರತ್ತಿ ಚಂದ್ರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕಾನೂನು ಕ್ರಮlegal proceedingsAmit Singhಅಮಿತ್ ಸಿಂಗ್K V Sharat ChandraMandya spಕೆ.ವಿ ಶರತ್ ಚಂದ್ರಮಂಡ್ಯ ಎಸ್ ಪಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


