ಪ್ರಧಾನಿ ಮೋದಿ ಜೊತೆ ಕುಳಿತು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಬೆಂಗಳೂರು ವಿದ್ಯಾರ್ಥಿಗೆ ಆಹ್ವಾನ
ನಗರದ ವಿದ್ಯಾರ್ಥಿನಿಯೊಬ್ಬಳಿಗೆ ಈ ಬಾರಿ ಪ್ರಧಾನಿ ಮೋದಿ ಜೊತೆ ಗಣರಾಜ್ಯೋತ್ಸವ ವೀಕ್ಷಿಸುವ ಅವಕಾಶ ಸಿಕ್ಕಿದೆ. ಜನವರಿ 26ರಂದು ನಡೆಯುವ ..

Published On :
ಬೆಂಗಳೂರು: ನಗರದ ವಿದ್ಯಾರ್ಥಿನಿಯೊಬ್ಬಳಿಗೆ ಈ ಬಾರಿ ಪ್ರಧಾನಿ ಮೋದಿ ಜೊತೆ ಗಣರಾಜ್ಯೋತ್ಸವ ವೀಕ್ಷಿಸುವ ಅವಕಾಶ ಸಿಕ್ಕಿದೆ. ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ ಸಮಾರಂಭದಲ್ಲಿ ಭಾಗಿಯಾಗಲು ಬೆಂಗಳೂರಿನ ವಿದ್ಯಾರ್ಥಿನಿಗೆ ದೆಹಲಿಯ ಮಾನವ ಸಂಪನ್ಮೂಲ ಇಲಾಖೆಯಿಂದ ಆಹ್ವಾನ ಬಂದಿದೆ.
ನಗರದ ಗೋಕುಲ್ ಎಕ್ಸ್ ಟೆನ್ಶನ್ ನಲ್ಲಿರುವ ನವ್ಕೀಸ್ ಶಾಲೆಯಲ್ಲಿ 11ನೇ ತರಗತಿಯಲ್ಲಿ ಓದುತ್ತಿರುವ ದೇವಿಕಾ ಸಂತೋಷ್ ಪ್ರಧಾನ ಮಂತ್ರಿ ಜೊತೆ ಕುಳಿತು ಗಣರಾಜ್ಯೋತ್ಸವ ಪರೇಡ್ ವೀಕ್ಷಣೆ ಮಾಡಲಿದ್ದಾಳೆ. ಕಳೆದ ವರ್ಷ ಸಿಬಿಎಸ್‍ಸಿಯ 10ನೇ ತರಗತಿಯಲ್ಲಿ ದೇಶದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ದೇವಿಕಾ ಒಬ್ಬಳಾಗಿದ್ದಳು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಸಚಿವಾಲಯದಿಂದ ಈ ವಿಶೇಷ ಆಹ್ವಾನ ಬಂದಿದೆ.
ಇದು ನನ್ನ ಅತಿ ದೊಡ್ಡ ಕನಸು, ನನಗೆ 10ನೇ ತರಗತಿಯ ಸಿಬಿಎಸ್‍ಸಿ ಪರೀಕ್ಷೆಯಲ್ಲಿ ಶೇ. 99.2 ಅಂಕಗಳು ಬಂದಿತ್ತು. ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸಲು ನಾನು ಕಾತುರಳಾಗಿದ್ದೇನೆ, ಪ್ರಧಾನ ಮಂತ್ರಿಗಳ ಜೊತೆ ಕುಳಿತು ಪರೇಡ್ ವೀಕ್ಷಿಸಲು ಅವಕಾಶ ನೀಡಿರುವ ಮಾನವ ಸಂಪನ್ಮೂಲ ಇಲಾಖೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿRepublic Day paradeಗಣರಾಜ್ಯೋತ್ಸವ ಪರೇಡ್Bengaluru studentಬೆಂಗಳೂರು ವಿದ್ಯಾರ್ಥಿನಿJanuary 26ಜನವರಿ 26
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


