ಹೊಸ ಪುಸ್ತಕ: ವಿದೇಶಿಗನ ಕಣ್ಣಲ್ಲಿ ದಕ್ಷಿಣ ಕನ್ನಡದದ ಹಳ್ಳಿ ಜೀವನ!
ಹೆಸರು ಆಡಮ್ ಕ್ಲಫಮ್ ವೃತ್ತಿ ಬಿಬಿಸಿ ಸಾಕ್ಷಚಿತ್ರ ನಿರ್ಮಾಪಕ ವಿಳಾಸ ದಕ್ಷಿಣ ಕನ್ನಡದ ಒಂದು ಹಳ್ಳಿ! ಹೌದು ಆಡಮ್ ಎಂಬ ದೂರ್ ದೇಶದ ವ್ಯಕ್ತಿಯೊಬ್ಬ ಬಿಬಿಸಿ ಸಾಕ್ಷಚಿತ್ರ ನಿರ್ಮಾಪಕನಾಗಿದ್ದವರು ಎರಡು....

Published On :
ಮಂಗಳೂರು: ಹೆಸರು ಆಡಮ್ ಕ್ಲಫಮ್ ವೃತ್ತಿ ಬಿಬಿಸಿ ಸಾಕ್ಷಚಿತ್ರ ನಿರ್ಮಾಪಕ ವಿಳಾಸ ದಕ್ಷಿಣ ಕನ್ನಡದ ಒಂದು ಹಳ್ಳಿ! ಹೌದು ಆಡಮ್ ಎಂಬ ದೂರ್ ದೇಶದ ವ್ಯಕ್ತಿಯೊಬ್ಬ ಬಿಬಿಸಿ ಸಾಕ್ಷಚಿತ್ರ ನಿರ್ಮಾಪಕನಾಗಿದ್ದವರು ಎರಡು ದಶಕಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಉದ್ಯಾವರ ಹೊಳೆಯ ದಡದ ಗ್ರಾಮದಲ್ಲಿ ನೆಲೆಸಿ ಇಲ್ಲಿನವರೇ ಆಗಿಹೋಗಿರುವ ಕಥೆ ಇದು. ಇದೇ ಜನವರಿ 28 ರಂದು ಸೆಂಟ್ರಲ್ ಲಂಡನ್ ನ ಫಾಯ್ಲ್ಸ್ ಬುಕ್ ಶಾಪ್ ನಲ್ಲಿ ಇವರ ಈ ಎರಡು ದಶಕಗಳ ಜೀವನಾನುಭವ ಒಳಗೊಂಡ ಪುಸ್ತಕ ಬಿಉಡುಗಡೆಯಾಗುತ್ತಿದೆ.
"ಈ ಪುಸ್ತಕ ಉದ್ಯಾವರ ನದಿ ದಂಡೆಯ ಮೇಲಿನ ಒಂದು ಗ್ರಾಮಜೀವನದ ಚಿತ್ರವಾಗಿದೆ" ಎಂದು ತಮ್ಮ ನೆನಪಿನಾಳಕ್ಕೆ ಇಳಿಯುವ ಕ್ಲಫಮ್ ತಾವು 200ರಿಂದ ಇಲ್ಲಿ ನೆಲೆಸಿರುವ ಅನುಭವವನ್ನು ನೆನೆಯುತ್ತಾರೆ.ಪುಸ್ತಕವು ಗ್ರಾಮದ ಕೃಷಿ ಸಮಾಜವನ್ನು ಆಧರಿಸಿದೆ ಆದರೆ ಇದುಅವರ ಮಕ್ಕಳು ಗಳಿಸುವ ಆದಾಯದ ಮೇಲೆ ನಿಂತಿದೆ.ಭಾರತ ಮತ್ತು ವಿದೇಶಗಳಲ್ಲಿನ ನಗರಗಳಲ್ಲಿ, ಹೆಚ್ಚಾಗಿ ಗಲ್ಫ್ ಗಳಲ್ಲಿ ಇಲ್ಲಿನ ಮಕ್ಕಳು ದುಡಿಯುತ್ತಾರೆ.ಇವರ ಪಾಲಿಗಿದು ಪುಸ್ತಕ ರೂಪದಲ್ಲಿರುವ ಡಾಕ್ಯುಮೆಂಟರಿಯಾಗಿದೆ.ಇದರಲ್ಲಿ ವರ್ಣರಂಜಿತ ಉತ್ಸವಗಳು, ಸಂಪ್ರದಾಯಗಳು ಮತ್ತು ಮದುವೆಗಳು ಮತ್ತು ಗ್ರಾಮಸ್ಥರ ಸಾಮಾನ್ಯಜೀವನದ ಏಳುಬೀಳುಗಳೆಲ್ಲವೂ ಚಿತ್ರಿತವಾಗಿದೆ.
ಈ ಪುಸ್ತಕವು ಪರಿಸರವಾದಿ ದಿನೇಶ್ ಹೊಳ್ಳ ಅವರ ಪ್ರಸ್ತಾವನೆ ಹೊಂದಿದೆ.ಅವರು ಕಂಬಳ, ಭೂತ ಕೋಲ, ತೆಂಗಿನ ಮರವೇರಿ ಕಾಯಿ ಕೀಳುವುದು, ಭತ್ತದ ಸಾಗುವಳಿ ಹೀಗೆ ನಾನಾ ವಿಧದ ಜೀವನದ ನಾನಾ ಸ್ಸಂಪ್ರದಾಯ, ಆಚರಣೆ ಬಗ್ಗೆ ವಿಒವರಿಸಿದ್ದಾರೆ. ವಿಶೇಷವೆಂದರೆ ‘Beware of falling coconuts’. ನಂತರ ಕ್ಲಫಮ್ ಅವರು ಬರೆದಿರುವ ಎರಡನೇ ಪುಸ್ತಕ ಇದೆ.
ತಾವು ಬ್ರಿಟನ್ ನ ಶೀತಲ ಚಳಿಯನ್ನು ದೂರವಾಗಿಸಲು ಕ್ಲಫಮ್ ಭಾರತದ ಪಶ್ಚಿಮ ಕರಾವಳಿಯನ್ನು ಆಯ್ಕೆ ಮಾಡಿಕೊಂಡಿದ್ದರು.ಅವರು ಕೃಷಿ ಸಮುದಾಯವನ್ನು ಹೆಚ್ಚು ಇಷ್ಟಪಡುತ್ತಾರೆ.ಅವರು ಗ್ರಾಮದಲ್ಲಿ ಯುವಕರ ಕೊರತೆಯನ್ನೂ ಗಮನಿಸುತ್ತಾರೆ. ಆದರೆ ಗ್ರಾಮಸ್ಥರು ಮಾತ್ರ ದೂರದ ನಗರಗಳಿಂದ ಮಕ್ಕಳು ಕಳಿಸುವ ಹಣದಲ್ಲಿ ಸಂತಸ ಕಾಣುತ್ತಾರೆ. ಅದೇ ರೀತಿ ಮಕ್ಕಳು ನಿವೃತ್ತರಾದ ಬಳಿಕ ಮತ್ತೆ ಗ್ರಾಮಕ್ಕೆ ಹಿಂತಿರುಗುತ್ತಾರೆ ಎನ್ನುವುದು ಸಹ ಹಿರಿಯರ, ಗ್ರಾಮವಾಸಿಗಳ ಕನಸಾಗುತ್ತದೆ.ಹಲವು ವರ್ಷಗಳಿಂದ ಗ್ರಾಮದಲ್ಲಿ ಜೀವನ ಮಾಡುತ್ತಿರುವ ತನ್ನ ಅನುಭವದಲ್ಲಿ, ಖಾಸಗಿ ವಾಹನಗಳ ಸಂಖ್ಯೆಯು ಏರಿದೆ, ರಸ್ತೆಗಳು ನಿರ್ಮಾಣವಾಗಿದೆ. ಬೀದಿ ದೀಪಗಳು ಹೆಚ್ಚಿನ ಸಂಖ್ಯಯಲ್ಲಿದೆ. ಎಂದೂ ಅವರು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


