ದಸರಾ ಉದ್ಘಾಟನೆಗೆ ಒಪ್ಪಿದ್ದ ಶ್ರೀಗಳಿಗಿತ್ತು ಜೀವ ಬೆದರಿಕೆ!
ಸೋಮವಾರ ಶಿವೈಕ್ಯರಾದ 111 ವರ್ಷದ ಡಾ. ಶಿವಕುಮಾರ ಸ್ವಾಮಿಗಳು ತಮ್ಮ ಕಾಯಕದಿಂದ ವಿಶ್ವಮಾನ್ಯತೆ ಗಳಿಸಿದ್ದವರು. ಇಂತಹಾ ಯೋಗಿಗಳಿಗೆ ಸಹ ಜೀವ...

Published On :
ಮೈಸೂರು: ಸೋಮವಾರ ಶಿವೈಕ್ಯರಾದ 111 ವರ್ಷದ ಡಾ. ಶಿವಕುಮಾರ ಸ್ವಾಮಿಗಳು ತಮ್ಮ ಕಾಯಕದಿಂದ ವಿಶ್ವಮಾನ್ಯತೆ ಗಳಿಸಿದ್ದವರು. ಇಂತಹಾ ಯೋಗಿಗಳಿಗೆ ಸಹ ಜೀವ ಬೆದರಿಕೆಗಳು ಬಂದಿತ್ತು ಎನ್ನುವುದು ವಿಚಿತ್ರವಾದರೂ ನಿಜ!
2008ರಲ್ಲಿ ಮೈಸೂರಿನ ವಿಶ್ವವಿಖ್ಯಾತ ದಸರಾ ಉತ್ಸವ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಲಾಗಿತ್ತು. ದಸರಾ ಉದ್ಘಾಟನೆಗಾಗಿ ಶ್ರೀಗಳು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ನವರಾತ್ರಿ ಉತ್ಸವ ಉದ್ಘಾಟನೆಗೆ ಒಪ್ಪಿಕೊಂಡ ಶ್ರೀಗಳಿಗೆ ಆ ವೇಳೆ ಎರಡು ಬಾರಿ ಬೆದರಿಕೆ ಪತ್ರi\ಗಳು ಬಂದಿದ್ದವು.
ಸಿದ್ದಗಂಗಾ ಮಠವು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರೆದುರು ತಮಗೆ ಬಂದಿದ್ದ ಬೆದರಿಕೆ ಪತ್ರಗಳನ್ನು ಬಹಿರಂಗ ಮಾಡಿತ್ತು. ದಸರಾ ಉತ್ಸವ ಅಂತ್ಯವಾದ ಬಳಿಕ ಸ್ವಾಮೀಜಿ ಈ ಪತ್ರಗಳನ್ನು ಬಹಿರಂಗಪಡಿಸಿದ್ದರು. ಶತಮಾನವನ್ನು ಕಂಡಿದ್ದ ಶ್ರೀಗಳು ಮತ್ತು ಶಿವರಾತ್ರಿ ದೇಶಿಕೇಂದ್ರರಿಬ್ಬರೂ ಆ ವೇಳೆ ಮಹಾರಾಜ ಕಾಲೇಜ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದ ಭಕ್ತ ಜನರಿಗೆ ಹರಸಿದ್ದರು.
"ಶ್ರೀಗಳು ದಸರಾ ಉದ್ಘಾಟನೆಗೆ ಒಪ್ಪಿಕೊಳ್ಳಬಾರದು ಎಂದು ಅನಾಮಧೇಯ ಪತ್ರವೊಂದು ಬಂದಿತ್ತು ಅದರಲ್ಲಿ ಶ್ರೀಗಳಿಗೆ ಬೆದರಿಕೆ ಹಾಕಲಾಗಿತ್ತು. ಆದರೆ ಸಿದ್ದಗಂಗಾ ಶ್ರೀಗಳು ಅದಕ್ಕೆ ಸೊಪ್ಪು ಹಾಕದೆ ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದರು ಮತ್ತು ಹಾಗೆಯೇ ಮಾಡಿದರು." ಸುತ್ತೂರು ಶ್ರೀಗಳು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Shivakumara SwamijiಬೆದರಿಕೆSiddaganga Muttಸಿದ್ದಗಂಗಾ ಮಠಶಿವಕುಮಾರ ಸ್ವಾಮೀಜಿMysuru Dasaraಮೈಸೂರು ದಸರಾThreats
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


