ಶ್ರೀಗಳ ಭಕ್ತರು ಆತಂಕ ಪಡುವ ಅಗತ್ಯವಿಲ್ಲ, ಆರೋಗ್ಯದಲ್ಲಿ ಕೊಂಚ ಸುಧಾರಣೆ: ಡಾ.ಪರಮೇಶ್
ಸಿದ್ದಗಂಗಾ ಶ್ರೀಗಳ ಆರೋಗ್ಯ ಮೊದಲಿಗಿಂತಲೂ ಕೊಂಚ ಸುಧಾರಣೆಯಾಗಿದ್ದು, ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದ್ದಾರೆ.

Published On :
ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯ ಮೊದಲಿಗಿಂತಲೂ ಕೊಂಚ ಸುಧಾರಣೆಯಾಗಿದ್ದು, ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದ್ದಾರೆ.
ಇಂದು 2ನೇ ಬಾರಿಗೆ ಮಾಧ್ಯಮಗಳಿಗೆ ಶ್ರೀಗಳ ಆರೋಗ್ಯದ ಕುರಿತು ಮಾಹಿತಿ ನೀಡಿದ ಅವರು, ಬೆಳಗ್ಗೆ ಇದ್ದ ಪರಿಸ್ಥಿತಿಗಿಂತಲೂ ಈಗ ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಹೀಗಾಗಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಶ್ರೀಗಳ ಆರೋಗ್ಯದ ಕುರಿತು ಬೆಂಗಳೂರಿನ ನುರಿತ ವೈದ್ಯರೊಂದಿಗೆ ಸಲಹೆ ಪಡೆದು ಚಿಕಿತ್ಸೆ ಮುಂದುವರೆಸಿದ್ದೇವೆ. ಕೆಲ ವೈದ್ಯರು ಬೆಂಗಳೂರಿನಿಂದ ಆಗಮಿಸುತ್ತಿದ್ದಾರೆ. ಅವರು ಬಂದ ಕೂಡಲೇ ಶ್ರೀಗಳಿಗೆ ಅವರು ಚಿಕಿತ್ಸೆ ನಡೆಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಶ್ರೀಗಳ ಭಕ್ತರು ಆತಂಕ ಪಡುವ ಅಗತ್ಯವಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ.. ಮಠದತ್ತ ಭಕ್ತರು ಬರುವುದು. ಕಾಲ ಕಾಲಕ್ಕೆ ಶ್ರೀಗಳ ಆರೋಗ್ಯದ ಕುರಿತು ಮಾಧ್ಯಮಗಳ ಮೂಲಕ ನಿಮಗೆ ನಾವೇ ಮಾಹಿತಿ ನೀಡುತ್ತೇವೆ. ಭಕ್ತರು ಮಠದತ್ತ ಬರುವುದು ಬೇಡ. ಇದರಿಂದ ಭದ್ರತೆಗೂ ತೊಂದರೆಯಾಗಲಿದೆ. ನಮ್ಮ ಕೆಲಸಗಳಿಗೂ ತೊಂದರೆಯಾಗಲಿದೆ ಎಂದು ಡಾ.ಪರಮೇಶ್ ಮನವಿ ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Healthಆರೋಗ್ಯTumkurತುಮಕೂರುSiddaganga Muttkarnataka policeಕರ್ನಾಟಕ ಪೊಲೀಸ್Dr.Shivakumar Swamijiಸಿದ್ದಗಂಗ ಮಠಡಾ ಶಿವಕುಮಾರ್ ಸ್ವಾಮೀಜಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


