ನಡೆದಾಡುವ ದೇವರ ಜತೆ ಕಲಾಂ ನಂಟು, ಶ್ರೀಗಳ ಕುರಿತು ವಿಮಾನದಲ್ಲೇ ಕವಿತೆ ರಚಿಸಿದ್ದ ಅಬ್ದುಲ್ ಕಲಾಂ!
ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮಿಗಳು ಇಂದು ಶಿವೈಕ್ಯರಾಗಿದ್ದಾರೆ.

Published On :
ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮಿಗಳು ಇಂದು ಶಿವೈಕ್ಯರಾಗಿದ್ದಾರೆ. ತಮ್ಮ ಕಾಯಕ ನಿಷ್ಠೆ ಸಮಾಜ ಸೇವೆಯಿಂದ ಭಕ್ತರು, ಸಾಮಾನ್ಯ ಜನರ ಮನೆದೇವರಂತಾಗಿದ್ದ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಒಮ್ಮೆ ಸ್ವಾಮೀಜಿ ಕುರಿತಂತೆ ಕವಿತೆಯನ್ನು ರಚಿಸಿದ್ದರು ಎನ್ನುವುದು ಅಚ್ಚರಿಯಾದರೂ ಸತ್ಯ.
ಇನ್ನೂ ವಿಶೇಷವೆಂದರೆ ಗುರುವಂದನೆ ಕಾರ್ಯಕ್ರಮಕ್ಕಾಗಿ ಆಗಮಿಸುತ್ತಿದ್ದ ಕಲಾಂ ತಾವು ವಿಮಾನದಲ್ಲಿದ್ದಾಗಲೇ ಆ ಹಿರಿಯರ ಕುರಿತಂತೆ ಈ ಕವಿತೆ ರಚಿಸಿದ್ದರು.ಆಗ ರಾಷ್ಟ್ರಪತಿಗಳಾಗಿದ್ದ ಕಲಾಂ ಅವರ ಕಾರ್ಯದರ್ಶಿ ಸುತ್ತೂರು ಶ್ರೀಗಳಿಗೆ ಕರೆ ಮಾಡಿ "ರಾಷ್ಟ್ರಪತಿ ಕಲಾಂ ಸ್ವಾಮೀಜಿ ಕುರಿತಂತೆ ಕವಿತೆ ರಚಿಸಿದ್ದಾರೆ.ಇದನ್ನು ಮಠಕ್ಕೆ ಫ್ಯಾಕ್ಸ್ ಮೂಲಕ ತಲುಪಿಸಲಾಗುತ್ತದೆ. ತಕ್ಷಣ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಕಾರ್ಯಕ್ರಮದಲ್ಲಿ ಹಾಡಲು ಸಾಧ್ಯವೆ?"ಎಂದೂ ಪ್ರಶಿನಿಸಿದ್ದಾರೆ.
ಆಗ ಅದಕ್ಕೊಪ್ಪಿದ ಶ್ರೀಗಳು ಗೊ.ರು ಚನ್ನಬಸಪ್ಪ ಅವರೊಡನೆ ಮಾತನಾಡಿದಾಗ ಚೆನ್ನಬಸಪ್ಪ ಕಲಾಂ ಬರೆದಿದ್ದ ಕವಿತೆಯನ್ನು ಕನ್ನಡಕ್ಕೆ ಅನುವಾದ ಮಾಡಿ ಕೊಡುತ್ತಾರೆ. ಹಾಗೂ ಆ ಕವಿತೆಯನ್ನು ಅಂದಿನ ಗುರುವಂದನೆ ಕಾರ್ಯಕ್ರಮದಲ್ಲಿ ಹಾಡಲಾಗಿತ್ತು.
ಅಬ್ದುಲ್ ಕಲಾಂ ಹೀಗೆ ತಮ್ಮ ಗುರುಗಳ ಮೇಲಿನ ಪ್ರೀತಿಯನ್ನು ಕವಿತೆಯ ಮೂಲಕ ಸಮರ್ಪಿಸಿ ಸಂತಸಗೊಂಡ ಆ ಕ್ಷಣ ಕಲಾಂ ಜೀವನದಲ್ಲಿ ಎಂದಿಗೂ ಮರೆಯಲಾಗದ್ದಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Shivakumara SwamijiAPJ Abdul Kalamಶಿವಕುಮಾರ ಸ್ವಾಮೀಜಿಎಪಿಜೆ ಅಬ್ದುಲ್ ಕಲಾಂPoemಕವಿತೆGuruvandana programಗುರುವಂದನಾ ಕಾರ್ಯಕ್ರಮ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


