ರಾಜ್ಯ

ಕಲಬುರ್ಗಿ ಲಾಡ್ಜ್ ಮ್ಯಾನೇಜರ್ ಹತ್ಯೆ: ಫೈರಿಂಗ್ ನಡೆಸಿ ಪೋಲೀಸರಿಂದ ಆರೋಪಿ ಬಂಧನ

ಜನವರಿ 10ರಂದು ನಡೆದಿದ್ದ ಲಾಡ್ಜ್ ಮ್ಯಾನೇಜರ್ ಮಲ್ಲಿಕಾರ್ಜುನ ಹತ್ಯೆ ಪ್ರಕರಣದ ಆರೊಪಿಯ ಮೇಲೆ ಗುಂಡು ಹಾರಿಸಿದ ಪೋಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರ್ಗಿ ಲಾಡ್ಜ್ ಮ್ಯಾನೇಜರ್ ಹತ್ಯೆ: ಫೈರಿಂಗ್ ನಡೆಸಿ ಪೋಲೀಸರಿಂದ ಆರೋಪಿ ಬಂಧನ
ಕಲಬುರ್ಗಿ ಲಾಡ್ಜ್ ಮ್ಯಾನೇಜರ್ ಹತ್ಯೆ: ಫೈರಿಂಗ್ ನಡೆಸಿದ ಪೋಲೀಸರಿಂದ ಆರೋಪಿ ಬಂಧನ
Published On :
ಕಲಬುರ್ಗಿ: ಜನವರಿ 10ರಂದು ನಡೆದಿದ್ದ ಲಾಡ್ಜ್ ಮ್ಯಾನೇಜರ್ ಮಲ್ಲಿಕಾರ್ಜುನ ಹತ್ಯೆ ಪ್ರಕರಣದ ಆರೊಪಿಯ ಮೇಲೆ ಗುಂಡು ಹಾರಿಸಿದ ಪೋಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ಹೊರವಲಯದ ವಾಡಿ ರಸ್ತೆಯಲ್ಲಿ ಈ ಫೈರಿಂಗ್ ನಡೆದಿದ್ದು ಆರೋಪಿ ಸಂತೋಷ್ ಸ್ವಾಮಿ ಮೇಲೆ ಎರಡು ಸುತ್ತು ಗುಂಡು ಹಾರಿಸಿದ ಪೋಲೀಸರು ಅವನನ್ನು ಬಂಧಿಸಿದ್ದಾರೆ.
ಘಟನೆ ವೇಳೆ ಇಬ್ಬರು ಪೋಲೀಸ್ ಪೇದೆಗಳಾದ ಹಾಜಿ ಮಲಂಗ ಮತ್ತು ಪ್ರಮೋದ್ ಎಂಬುವವರಿಗೆ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿಚಿಕಿತ್ಸೆ ಒದಗಿಸಲಾಗುತ್ತಿದೆ.
ಕಲಬುರ್ಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಸಂತೋಷ್ ಲಾಡ್ಜ್ ಮ್ಯಾನೇಜರ್ ಮಲ್ಲಿಕಾರ್ಜುನ ಅವರ ಹತ್ಯೆಯಾಗಿತ್ತು. ಆರೋಪಿ ತಾನು ಲಾಡ್ಜ್ ಮ್ಯಾನೇಜರ್ ಆಗಬೇಕೆಂದಿದ್ದು ಆ ಸ್ಥಾನಕ್ಕೆ ಮಲ್ಲಿಕಾರ್ಜುನ ನೇಮಕವಾಗಿದ್ದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆಸಿದ್ದ. ಆರೋಪಿಯನ್ನು ಬಂದಿಸಲು ಪೋಲೀಸರು ತೆರಳಿದ್ದಾಗ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲು ಪ್ರಯತ್ನಿಸಿದ ಸಂತೋಷ್  ಮೇಲೆ ಪೋಲೀಸರು ಫೈರಿಂಗ್ ಮಾಡಿದ್ದಾರೆ.ಆರ್‍ಜೆ ನಗರ ಠಾಣೆ ಪಿಎಸ್‍ಐ ಮಹಾಂತೇಶ್ಈ ಫೈರಿಂಗ್ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.