ಮೈಸೂರು: ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ, ಅಪರಿಚಿತರಿಂದ ಕೊಲೆ ಶಂಕೆ
ಅರ್ಧ ಸುಟ್ಟಂತಹಾ ಸ್ಥಿತಿಯಲ್ಲಿರಿವ ಮಹಿಳೆಯ ಮೃತದೇಹವೊಂದು ಮೈಸೂರು ಚಾಮುಂಡಿ ಬೆಟ್ಟದ ಸಮೀಪ ಮೀಸಲು ಅರಣ್ಯದಲ್ಲಿ ಪತ್ತೆಯಾಗಿದ್ದು ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

Published On :
ಮೈಸೂರು: ಅರ್ಧ ಸುಟ್ಟಂತಹಾ ಸ್ಥಿತಿಯಲ್ಲಿರಿವ ಮಹಿಳೆಯ ಮೃತದೇಹವೊಂದು ಮೈಸೂರು ಚಾಮುಂಡಿ ಬೆಟ್ಟದ ಸಮೀಪ ಮೀಸಲು ಅರಣ್ಯದಲ್ಲಿ ಪತ್ತೆಯಾಗಿದ್ದು ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಗುರುವಾರ ಮದ್ಯಾಹ್ನ ಮೃತದೇಹ ಪತ್ತೆಯಾಗಿದ್ದು ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.ಆದರೆ ಒಂದು ವಾರದ ಹಿಂದೆ ಈಕೆ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ.
ಉತ್ತನಹಳ್ಳಿ-ಚಾಮುಂಡಿ ಬೆಟ್ಟ್ ರಸ್ತೆಯ ಜ್ವಾಲಾಮುಖಿ ವಾಚ್ ಟವರ್, ಮಹದೇಶ್ವರ ದೇವಾಲಯ ಸಮೀಪ ಮೃತದೇಹ ಪತ್ತೆಯಾಗಿದೆ. ಗುರುವಾರ ಮದ್ಯಾಹ್ನ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಜಗದೀಶ್ ಮತ್ತು ವಿರೂಪಾಕ್ಷ ಈ ದೇಹವನ್ನು ಪತ್ತೆ ಮಾಡಿದ್ದಾರೆ. ಮಹಿಳೆಯು 32ರಿಂದ 35ರ ನಡುವಿನ ವಯಸ್ಸಿನವಳೆಂದು ತನಿಖೆ ಕೈಗೊಂಡಿರುವ ಕೆ.ಆರ್. ಪೋಲೀಸರು ತಿಳಿಸಿದ್ದಾರೆ.
ತಲೆ ಭಾಗದಲಿ ಕಲ್ಲಿನ ಚೂರುಗಳು ಸಿಕ್ಕ ಕಾರಣ ಮಹಿಳೆಯ ತಲೆಯನ್ನು ಬಂಡೆಯೊಂದಕ್ಕೆ ಗುದ್ದಿ ಸಾಯಿಸಲಾಗಿದೆ ಎಂದು ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದಾಗಿ ಮಹಿಳೆಯ್ ಕಾಲುಗಳಲ್ಲಿರುವ ಎರಡು ಬೆಳ್ಳಿ ಕಾಲುಂಗುರಗಳು ಹಾಗೂ ಇತರೆ ಲೋಹದ ಆಭರಣಗಳ ಹೊರತು ಬೇರಾವ ಸಾಕ್ಷ್ಯಾಧಾರಗಳಿಲ್ಲ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


