ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ನ್ಯಾಯಾಂಗ ಬಂಧನ ಜ.29ರವರೆಗೆ ವಿಸ್ತರಣೆ
ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಜ.29ರವರೆಗೆ ವಿಸ್ತರಣೆಯಾಗಿದೆ.

Published On :
ಕೊಳ್ಳೇಗಾಲ" ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಜ.29ರವರೆಗೆ ವಿಸ್ತರಣೆಯಾಗಿದೆ.
ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ ಹಾಗೂ ಡೊಡ್ಡಯ್ಯ ನ್ಯಾಯಾಂಗ ಬಂಧನ ಅವಧಿ ಇಂದು (ಬುಧವಾರ) ಕೊನೆಗೊಂಡಿದ್ದು ಪೋಲೀಸರು ಅವರನ್ನು ಮೈಸೂರು ಕಾರಾಗೃಹದಿಂಡ ವೀಡೊಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಸಮಯದಲ್ಲಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಜಿ. ಬಸವರಾಜು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಜ.29ರವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ.
ಈ ನಡುವೆ ಆರೋಪಿಗಳ ಪರ ವಾದಿಸಲು ಯಾವೊಬ್ಬ ವಕೀಲರೂ ನ್ಯಾಯಾಲಯದಲ್ಲಿರಲಿಲ್ಲ. ಈ ಕುರಿತು ನ್ಯಾಯಾಧೀಶರು ಆರೋಪಿಗಳನ್ನು ಕೇಳಿದಾಗ ಇಮ್ಮಡಿ ಮಹದೇವಸ್ವಾಮಿ ತಾನು ಮಡಿಕೇರಿಯ ಸಿದ್ದಾರ್ಥ ಎಂಬ ವಕೀಲರೊಡನೆ ಮಾತನಾಡಿರುವುದಾಗಿ ಹೇಳಿದರೆ ಉಳಿದ ಮೂವರು ತಮಗೆ ಹತ್ತು ದಿನಗಳ ಕಾಲಾವಕಾಶ ಕೊಟ್ಟರೆ ವಕೀಲರ ನೇಮಕ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಆಗ ನ್ಯಾಯಾಲಯ ಪ್ರಕರಣ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ChamarajanagarJudicial Custodyನ್ಯಾಯಾಂಗ ಬಂಧನSulvadi Maramma prasad caseSulvadi Maramma templeಸುಳ್ವಾಡಿ ಮರಾಮ್ಮ ಪ್ರಸಾದ ಪ್ರಕರಣಸುಳ್ವಾಡಿ ಮರಾಮ್ಮ ದೇವಸ್ಥಾನಚಾಮರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


