'ಬೇಟಿ ಬಚಾವೋ' ಯೋಜನೆ ಅನುಷ್ಠಾನ: ಗದಗ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿಯ ಗರಿ!
ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ "ಬೇಟಿ ಬಚಾವೋ ಬೇಟಿ ಪಢಾವೋ" ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟ್ಃಆನಗೊಳಿಸಿದ್ದ ಗದಗ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

Published On :
ನವದೆಹಲಿ: ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ "ಬೇಟಿ ಬಚಾವೋ ಬೇಟಿ ಪಢಾವೋ" ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದ ಗದಗ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
"ಬೇಟಿ ಬಚಾವೋ ಬೇಟಿ ಪಢಾವೋ" ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಉವಲ್ಲಿ ಮಹತ್ವದ ಯಶಸ್ಸು ಗಳಿಸಿದ ದೇಶದ ವಿವಿಧ ರಾಜ್ಯಗಳ 25 ಜಿಲ್ಲೆಗಳಿಗೆ ಪ್ರಶಸ್ತಿ ಬಂದಿದ್ದು ಕರ್ನಾಟಕದ ಗದಗ ಸಹ ಇವುಗಳಲ್ಲಿ ಒಂದೆನಿಸಿದೆ.
ಗದಗದಲ್ಲಿ ಈ ಯೋಜನೆ ಜಾರಿಗಾಗಿ ಶ್ರಮಿಸಿದ ಎಲ್ಲರಿಗೆ ಜಿಲ್ಲಾಡಳಿತಕ್ಕೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಡಾ ಜಯಮಾಲಾ ಕೃತಜ್ಞತೆ ಹೇಳಿದ್ದಾರೆ.
ಜನವರಿ 24ರಂದು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ.
ಇದಕ್ಕೂ ಹಿಂದೆ ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ಶ್ವ ಶೌಚಗೃಹ ದಿನಾಚರ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಗದಗ ಜಿಲ್ಲೆ ಏಳನೇ ಸ್ಥಾನ ಪಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


