ವಿದೇಶಗಳಲ್ಲೂ ಖ್ಯಾತಿ ಗಳಿಸಿದ್ದ ಸಾವಯವ ಕೃಷಿಕ, ನಾಡೋಜ ನಾರಾಯಣ ರೆಡ್ಡಿ ನಿಧನ: ಸಿಎಂ ಸಂತಾಪ
ಸಾವಯಕ ಕೃಷಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ, ಬೆಂಗಳೂರಿನ ನಿವಾಸಿ ಸಾವಯವ ಕೃಷಿಕ ನಾಡೋಜ ನಾರಾಯಣ ರೆಡ್ಡಿ (80) ನಿಧನರಾಗಿದ್ದಾರೆ.

Published On :
ಬೆಂಗಳೂರು: ಸಾವಯಕ ಕೃಷಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ, ಬೆಂಗಳೂರಿನ ನಿವಾಸಿ ಸಾವಯವ ಕೃಷಿಕ ನಾಡೋಜ ನಾರಾಯಣ ರೆಡ್ಡಿ (80) ನಿಧನರಾಗಿದ್ದಾರೆ.
ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಸರಳ ಪರಿಹಾರವನ್ನೂ ನಾರಾಯಣ ರೆಡ್ಡಿ ಸೂಚಿಸುತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಕೆಲವು ಇತ್ತೀಚಿನ ಪದ್ಧತಿಗಳನ್ನು ನಾರಾಯಣ ರೆಡ್ಡಿ ಕಟುವಾಗಿ ಟೀಕಿಸುತ್ತಿದ್ದರು.
ಮೂವರು ಗಂಡುಮಕ್ಕಳು ಹಾಗೂಪತ್ನಿಯನ್ನು ಅಗಲಿರುವ ನಾರಾಯಣ ರೆಡ್ಡಿ ಅವರ ಅಂತ್ಯ ಸಂಸ್ಕಾರ ಜ.14 ರಂದು ಮಧ್ಯಾಹ್ನ ನಡೆಯಲಿದೆ. ಹೋಟೆಲ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ನಾರಾಯಣ ರೆಡ್ಡಿ, ಆ ನಂತರ ಲಾರಿ ಆಫೀಸಿನಲ್ಲಿ ಪ್ಯೂನ್ ಕೆಲಸಕ್ಕೆ ಸೇರಿಕೊಂಡು, ಅಲ್ಲಿ ಗುಮಾಸ್ತನಾಗಿ, ಮ್ಯಾನೇಜರ್ ಆಗಿ ಕೆಲಸಮಾಡಿದ್ದರು. ನಂತರ 1972 ರಲ್ಲಿ ಮರಳೇನಹಳ್ಳಿ ಬಳಿ ಜಮೀನು ಖರೀದಿಸಿ ಅಲ್ಲಿ ಸಾವಯವ ಕೃಷಿ ಪ್ರಾರಂಭಿಸಿದ್ದರು.
ಸಾವಯವ ಕೃಷಿಗೆ ಸಂಬಂಧಿಸಿದಂತೆ ಅಪಾರ ಜ್ಞಾನವನ್ನು ಹೊಂದಿದ್ದ ನಾರಾಯಣ ರೆಡ್ಡಿ ಅವರು ಜಪಾನ್ನ ವಿಶ್ವವಿಖ್ಯಾತ ರೈತ ಫುಕುವೋಕಾ ಅವರ ವಿಚಾರಗಳಿಂದ ಪ್ರೇರಿತರಾಗಿ, ರಾಸಾಯನಿಕ ರಹಿತವಾಗಿ ಸಂಪೂರ್ಣವಾಗಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ಸು ಕಂಡಿದ್ದರು. ಸಾವಯವ ಕೃಷಿ ತಜ್ಞ ನಾರಾಯಣ ರೆಡ್ಡಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


