ರಾಜ್ಯ

ಬೆಂಗಳೂರು: ಪ್ರಿಯಕರನ ಜತೆ ಸೇರಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟಳು!

ಬಾಡಿಗೆಗಿದ್ದ ಮನೆ ಮಾಲೀಕನ ಮಗನೊಡನೆ ಅಕ್ರ್ಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪತಿಯ ಹತ್ಯೆಗಾಗಿ ಸುಪಾರಿ ನೀಡ ಹೊರಟಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಪ್ರಿಯಕರನ ಜತೆ ಸೇರಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟಳು!
ಬೆಂಗಳೂರು: ಪ್ರಿಯಕರನ ಜತೆ ಸೇರಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟಳು!
Published On :
ಬೆಂಗಳೂರು: ಬಾಡಿಗೆಗಿದ್ದ ಮನೆ ಮಾಲೀಕನ ಮಗನೊಡನೆ ಪ್ರೇಮಸಂಬಂಧ  ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪತಿಯ ಹತ್ಯೆಗಾಗಿ ಸುಪಾರಿ ನೀಡಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಸಂಬಂಧ ಬೆಂಗಳೂರಿನ ಹುಳಿಮಾವು ವ್ಯಾಪ್ತಿ ಅರೆಕೆರೆ ನಿವಾಸಿ ನಾಗರಾಜ ಎನ್ನುವವರ ಹತ್ಯೆಗೆ ಆತನ ಪತ್ನಿ ಮಮತಾ ಸುಪಾರಿ ನೀಡಿದ್ದಳು
ಮನೆಯಲ್ಲಿ ತಾನು  ಇಲ್ಲದ ವೇಳೆ ಮನೆ ಮಾಲೀಕನ ಪುತ್ರ ಪ್ರಶಾಂತ್ ನೊಡನೆ ಸರಾಸ ಸಲ್ಲಾಪ ನಡೆಸುತ್ತಿದ್ದ ಮಮತಾ ವಿಚಾರ ನಾಗರಾಜ್ ಗಮನಕ್ಕೆ ಬಂದು ಪ್ರಶ್ನಿಸಿದ್ದಾನೆ. ಆಗ ಪತಿ ತಮ್ಮಿಬ್ಬರ ಪ್ರೀತಿಗೆ ಅಡ್ಡಿಯಾಗಬಹುದೆಂದು ಪ್ರಶಾಂತ್ ಗೆ ತಿಳಿಸಿದ್ದಾಳೆ. ಆಗ ಪ್ರಶಾಂತ್ ಹಾಗೂ ಮಮತಾ ಚರ್ಚಿಸಿ ಮಮತಾ ಗಂಡ ನಾಗರಾಜ್ ನನ್ನು ಕೊಲ್ಲಲು 1.5 ಲಕ್ಷ ಲಕ್ಷ ರು. ಸುಪಾರಿ ನೀಡಿದ್ದಾಳೆ.
ಸುಪಾರಿ ಪಡೆದಿದ್ದ ಹಂತಕರು ಡಿಸೆಂಬರ್ 14ರಂದು ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ನಾಗರಾಜ್ ಮೇಲೆ ದಾಳಿ ನಡೆಸಿಸಿ ಹಣ, ಒಡವೆ, ಮೊಬೈಲ್ ಗಳನ್ನು ದೋಚಿದ್ದಾರೆ. ಈ ಕುರಿತಂತೆ ನಾಗರಾಜ್ ಪೋಲೀಸರಿಗೆ ದೂರು ಸಲ್ಲಿಸಿದ್ದು ಆ ಸಮಯ ಮಮತಾ ತನಗೇನೂ ಅರಿವಿಲ್ಲದಂತಿದ್ದಳು.
ದಾಳಿ ನಡೆಸಿದ್ದ ಸುಪಾರಿ ಹಂತಕರನ್ನು ವಶಕ್ಕೆ ಪಡೆದ ಪೋಲೀಸರು ತೀವ್ರ ವಿಚಾರಣೆ ನಡೆಸಿದಾಗ ಮಮತಾಳ ಇನ್ನೊಂದು ಮುಖ ಬೆಳಕು ಕಂಡಿದೆ.ಈ ಬಗ್ಗೆ ತಿಳಿದ ನಾಗರಾಜ್ ಆಘಾತಗೊಂಡಿದ್ದಾರೆ.
ಸದ್ಯ ಪೋಲೀಸರು ಆರೋಪಿಗಳಾದ ಮಮತಾ (28), ಪ್ರಶಾಂತ್ (20), ಅನಿಲ್ ಬಿಸ್ವಾಸ್ (21), ಜಾಕಿರ್ ಪಾಷ (20) ಮತ್ತು ಹರೀಶ್‍ಕುಮಾರ್ (20) ಬಂಧಿಸಿದ್ದಾರೆ. ಅವರು ಸುಲಿಗೆ ಮಾಡಿದ್ದ ಚಿನ್ನದ ಸರ, ಮೊಬೈಲ್, ಒಡವೆಗಳು, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.