ವಿದ್ಯಾರ್ಥಿಗೆ ದಿನಕ್ಕೆ ಕೇವಲ 7 ರೂ. ಶುಲ್ಕ ಪಡೆಯುವ ರಾಜ್ಯದಲ್ಲಿನ ಖಾಸಗಿ ಶಾಲೆ ಎಲ್ಲಿದೆ ಗೊತ್ತೆ?
ಕ್ಷಾಂತರ ರುಪಾಯಿ ಡೊನೇಶನ್ ಪಡೆದು ಸಾವಿರಾರು ರುಪಯಿ ಫೀಸು ಕಟ್ಟಿಸಿಕೊಳ್ಳುವ ಶಾಲೆಗಳ ನಡುವೆ ಈ ಶಾಲೆ ...

Published On :
ಹುಬ್ಬಳ್ಳಿ: ಲಕ್ಷಾಂತರ ರುಪಾಯಿ ಡೊನೇಶನ್ ಪಡೆದು ಸಾವಿರಾರು ರುಪಯಿ ಫೀಸು ಕಟ್ಟಿಸಿಕೊಳ್ಳುವ ಶಾಲೆಗಳ ನಡುವೆ ಈ ಶಾಲೆ ವಿಭಿನ್ನವಾಗಿದೆ, ದಿನಕ್ಕೆ ಕೇವಲ7 ರು ಮಾತ್ರ ಶುಲ್ಕ ತೆಗೆದುಕೊಳ್ಳಲಾಗುತ್ತದೆ.
ಹೌದು ಹುಬ್ಬಳ್ಳಿಯ ಬಾಪೂಜಿ ವಿದ್ಯಾನಿಕೇತನ ಶಾಲೆ ಎಲ್ ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ದಿನಕ್ಕೆ ಕೇವಲ 7 ರು ಮಾತ್ರ ಶುಲ್ಕ ಪಡೆಯುತ್ತದೆ. ಮೂರು ವರ್ಷದ ಹಿಂದೆ ಆರಂಭವಾಗಿರುವ ಈ ಶಾಲೆ ಪ್ರೀ ನರ್ಸರಿ ಮಕ್ಕಳಿಗೆ ಕೇವಲ 5 ರು ಹಾಗೂ ಎಲ್ ಕೆಜಿ ಮತ್ತು ಯುಕೆಜಿ ಮಕ್ಕಳಿಗೆ 7 ರು . ಶುಲ್ಕ ವಿಧಿಸುತ್ತದೆ.
ಈ ಶಾಲೆಯಲ್ಲಿ ಸುಮಾರು 140 ವಿದ್ಯಾರ್ಥಿಗಳಿದ್ದು, ಅವರೆಲ್ಲಾ ಬಹುತೇಕ ಬಡತನದ ಹಿನ್ನೆಲೆಯುಳ್ಳವರಾಗಿದ್ದಾರೆ, ಶಾಲೆಯಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ, ಆಟದ ಮೈದಾನ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಹುಬ್ಬಳ್ಳಿಯ ನಿವೃತ್ತ ಶಿಕ್ಷಕರಾದ ವಲ್ಳಿಮಹಮೊದ್ ಅವರ ಕನಸಿನ ಶಾಲೆಯಾಗಿದೆ, ಯಾವುದೇ ಡೊನೇಷನ್ ಪಡೆಯದೇ ಕೇವಲ ಕಡಿಮೆ ಮೊತ್ತದ ಹಣವನ್ನು ಶುಲ್ತ ಪಡೆಯುತ್ತಾರೆ.
ಶಾಲೆಯಲ್ಲಿ 9 ಶಿಕ್ಷಕರಿದ್ದು, ಮಕ್ಕಳಿಂದ ಪಡೆಯುವ ಶುಲ್ಕವನ್ನು ಶಿಕ್ಷಕರ ವೇತನಕ್ಕಾಗಿ ಬಳಸಲಾಗುತ್ತಿದೆ, ಈ ಶಾಲೆಗ ಸ್ಥಳೀಯ ಉದ್ಯಮಿಗಳು ಡೊನೇಶನ್ ನೀಡುತ್ತಾರೆ. ಹುಬ್ಬಳ್ಳಿ ಮತ್ತು ಧಾರವಾಡದ ಹಲವು ಯುವಶಿಕ್ಷಕರು ಇಲ್ಲಿಗೆ ಬಂದು ಉಚಿತವಾಗಿ ಪಾಠ ಮಾಡಿ ಹೋಗುತ್ತಾರೆ,
ನಾನು ವಿದ್ಯಾಭ್ಯಾಸ ಮಾಡುವಾಗ ನನ್ನ ಕುಟುಂಬ ಆರ್ಥಿಕ ಮುಗ್ಗಟ್ಟಿನಲ್ಲಿತ್ತು, ಹೀಗಾಗಿ ನಾನು ನನ್ನ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು, ಆ ವೇಳೆ ಸಮಾಜಕ್ಕೆ ನಾನು ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆ, ಹೀಗಾಗಿ ತಿಂಗಳಿಗೆ ಪ್ರತಿ ವಿದ್ಯಾರ್ಥಿಯಿಂದ ಕೇವಲ 210 ರುಪಾಯಿ ಪಡೆಯುತ್ತೇವೆ, ಹೆಚ್ಚಿನ ಶುಲ್ಕ ವಿಧಿಸುವುದರಿಂದ ಹಲವು ಮಕ್ಕಳು ಶಾಲೆಯಿಂದ ವಂಚಿತರಾಗುತ್ತಾರೆ, ಶಾಲೆಯ ದಾಖಲಾತಿ ಸಮಯದಲ್ಲಿ 500 ರು ಹಣ ಪಡೆಯುತ್ತೇವೆ,ಅದರಲ್ಲಿ ಮಕ್ಕಳಿಗೆ ಸಮವಸ್ತ್ರ ಹಾಗೂ ಬರಹ ಸಾಮಾಗ್ರಿ ಪೂರೈಕೆ ಮಾಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


