ಬೆಳಗಾವಿ: ಸೇತುವೆ ಕುಸಿದು ಕಾರು ನೀರುಪಾಲು, ತಪ್ಪಿದ ಅನಾಹುತ
ಸೇತುವೆಯೊಂದು ಕುಸಿದ ಪರಿಣಾಮ ಕಾರೊಂದು ನದಿಗುರುಳಿದ್ದು ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗ....

Published On :
ಬೆಳಗಾವಿ: ಸೇತುವೆಯೊಂದು ಕುಸಿದ ಪರಿಣಾಮ ಕಾರೊಂದು ನದಿಗುರುಳಿದ್ದು ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬೇವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮಲಪ್ರಭಾ ನದಿಗೆ ಕಟ್ಟಿದ್ದ ಸೇತುವೆ ಕುಸಿದ ಕಾರಣ್ಭ ಈ ಅಪಘಾತ ಸಂಭವಿಸ್ದೆ.ಇಂಡಿಕಾ ಕಾರಿನಲ್ಲಿ ಕಿತ್ತೂರಿನಿಂದ ಬೈಲಹೊಂಗಲಕ್ಕೆ ಪ್ರಯಾಣಿಸುತಿದ್ದ ಚಿದಾನಂದ್ ಚಿನಿವಾಲರ್ ಹಾಗೂ ಅವರ ಸ್ನೇಹಿತ ಅಪಾಯದಿಂದ ಪಾರಾಗಿದ್ದಾರೆ.
ಬೇವಿನಕೊಪ್ಪ ಗ್ರಾಮದ ಸಮೀಪ ಮಲಪ್ರಭಾ ಸೇತುವೆ ಮೇಲೆ ಪ್ರಯಾಣಿಸುವಾಗ ಕಾರ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತುದಿಗೆ ಹೋಗಿ ಗುದ್ದಿದೆ.ಹಾಗೆ ಗುದ್ದುತ್ತಲೇ ಸೇತುವೆ ಕುಸಿದಿದ್ದು ಕಾರು ನದಿಗೆ ಉರುಳಿ ಬಿದ್ದಿದೆ. ನದಿಯಲ್ಲಿ ಕಿರುಚಾಟ ಕೇಳಿದ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಇಬ್ಬರನ್ನೂ ರಕ್ಷಿಸಿದ್ದಾರೆ. ಅಲ್ಲಎ ಹಗ್ಗ ಕಟಿ ಕಾರನ್ನು ಸಹ ನೀರಿನಿಂಡ ಮೇಲೆ ತಂದಿದ್ದಾರೆ.
ಬೈಲಹೊಂಗಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


