ವಿಜಯಪುರ: ಸಹೋದರರಿಬ್ಬರ ಭೀಕರ ಕೊಲೆ!
ಹಳೆ ವೈಷಮ್ಯದ ಕಾರಣ ದುಷ್ಕರ್ಮಿಗಳು ಸಹೋದರರಿಬ್ಬರನ್ನು ಭೀಕರವಾಗಿ ಕೊಲೆ ಮಾಡುರುವ ಘಟನೆ ವಿಜಯಪುರದಲ್ಲಿ ನಡೆದಿದೆ

Published On :
ವಿಜಯಪುರ: ಹಳೆ ವೈಷಮ್ಯದ ಕಾರಣ ದುಷ್ಕರ್ಮಿಗಳು ಸಹೋದರರಿಬ್ಬರನ್ನು ಭೀಕರವಾಗಿ ಕೊಲೆ ಮಾಡುರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ ಜೈ ಕರ್ನಾಟಕ ಕಾಲೋನಿಯಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ಈ ಘಟನೆ ನಡೆದಿದ್ದು ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಸಲೀಂ ಅಬ್ದುಲ ಗಣಿ ಕೋಚಮನ(35) ಹಾಗೂ ರಜಾಕ್ ಅಬ್ದುಲ್ ಗಣಿ ಕೋಚಮನ(28) ಎಂಬ ಸೋದರರು ಹತ್ಯೆಗೀಡಾದ ದುರ್ದೈವಿಗಳು. ದುಷ್ಕರ್ಮಿಅಗ್ಳು ಜೋಡಿ ಕೊಲೆ ನಡೆಸಿದ್ದಲ್ಲದೆ ಇಬ್ಬರ ಶವಗಳನ್ನು ಬೇರೆ ಬೇರೆ ಕಡೆ ಎಸೆದಿದ್ದರು.
ಸಲೀಂ ನನ್ನು ಕೊಂದು ಕಾಲೋನಿಯ ಸಮೀಪವೇ ಎಸೆದು ಹೋದರೆ, ಅವನ ತಮ್ಮ ರಜಾಕ್ ನನ್ನು ಹತ್ಯೆ ಮಾಡಿ ನಗರದ ಸರ್ಕಾರಿ ಕಾಲೇಜಿನ ಆವರಣದಲ್ಲಿ ಎಸೆಯಲಾಗಿತ್ತು.
ಮೃತರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಹಳೆ ದ್ವೇಷದಿಂಡ ಈ ಕೃತ್ಯ ನಡೆದಿರಬಹುದು ಎಂದು ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ವಿಜಯಪುರ ಗಾಂಧಿ ಚೌಕ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


