ಬೆಂಗಳೂರು: 15 ವರ್ಷ ಆಯಸ್ಸು ಮುಗಿದ ಪ್ರಯಾಣಿಕ ವಾಹನಗಳು ರಸ್ತೆಗಿಳಿಯುವಂತಿಲ್ಲ!
ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ 15 ವರ್ಷ ಅವಧಿ ಮುಗಿದಿರುವ ಖಾಸಗಿ ಬಸ್ ಗಳನ್ನು ನಿಷೇದಿಸಲು ಸರ್ಕಾರ ಚಿಂತಿಸಿದೆ ಎಂದು ...

Published On :
ಬೆಂಗಳೂರು: ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ 15 ವರ್ಷ ಅವಧಿ ಮುಗಿದಿರುವ ಖಾಸಗಿ ಬಸ್ ಗಳನ್ನು ನಿಷೇದಿಸಲು ಸರ್ಕಾರ ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಹಾಗೂ ಖಾಸಗಿ ಬಸ್ ಗಳಿಂದ ಹಲವು ಅಪಘಾತಗಳು ಸಂಭವಿಸುತ್ತಿದೆ. ಇದರಿಂದಾಗಿ ಹಲವು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ, ಹೀಗಾಗಿ ಫಿಟ್ನೆಸ್ ಪ್ರಮಾಣ ಪತ್ರ ನೀಡದಿರಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. 15 ವರ್ಷ ಅವದಿ ಮುಗಿದಿರುವ ಯಾವುದೇ ಪ್ರಯಾಣಿಕ ವಾಹನಗಳಿಗೆ ಅನುಮತಿ ನವೀಕರಿಸದಿರಲು ನಿರ್ಧರಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಠಿಯಿಂದ ತಾಂತ್ರಿಕವಾಗಿ ಬಲಹೀನವಾಗಿರುವ ವಾಹನಗಳನ್ನು ರಸ್ತೆಗಿಳಿಸದಂತೆ ತಡೆಯಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಆರ್ ಟಿ ಓ ಇಲಾಖೆ ತಿಳಿಸಿದೆ. ಹೊಸ ಪ್ರಯಾಣಿಕ ವಾಹನಗಳ ನೋಂದಣಿ ಸಮಯದಲ್ಲಿ ಅವುಗಳ ಅವಧಿಯನ್ನು ಕೇವಲ 15 ವರ್ಷಗಳಿಗೆ ಸೀಮಿತಗೊಳಿಸಿ ಪರವಾನಗಿ ನೀಡಬೇಕೆಂದು ಹೇಳಲಾಗಿದೆ.
ಈಗಾಗಲೇ ಪರವಾನಗಿ ನೀಡಲಾಗಿರುವ ಪ್ರಯಾಣಿಕ ವಾಹನಗಳು, ಮತ್ತೆ ಪರವಾನಗಿ ದಿನಾಂಕವನ್ನು ಬದಲಾಯಿಸಿಕೊಳ್ಳದಿದ್ದರೇ ಅಂತಹ ವಾಹನಗಳ ಪರವಾನಗಿಯನ್ನು ನವೀಕರಿಸದಿರಲು ನಿರ್ದರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅನುಮತಿpermit15-year-oldpassenger vehiclesRTO officials15 ವರ್ಷ. ಪ್ರಯಾಣಿಕ ವಾಹನಗಳುಪ್ರಾದೇಶಿಕ ಸಾರಿಗೆ ಅಧಿಕಾರಿಗಳು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


