ರಾಜ್ಯದ ಸೋಷಿಯಲ್ ಮೀಡಿಯಾ ಜವಾಬ್ದಾರಿ ಬಿಜೆಪಿ ಕೇಂದ್ರ ನಾಯಕರ ಸುಪರ್ದಿಗೆ!
ಭಾರತೀಯ ಜನತಾ ಪಕ್ಷ ಹೆಚ್ಚು ರಾಷ್ಟ್ರಮಟ್ಟದಲ್ಲೇ ಕೇಂದ್ರೀಕೃತವಾಗುತ್ತಿದೆ ಎಂಬ ಆರೋಪಗಳ ಮಧ್ಯೆಯೇ ರಾಜ್ಯಗಳ ಸಾಮಾಜಿಕ ಮಾಧ್ಯಮಗಳ ಹೊಣೆಗಾರಿಕೆಯನ್ನು ...

Published On :
ಬೆಂಗಳೂರು: ಭಾರತೀಯ ಜನತಾ ಪಕ್ಷ ಹೆಚ್ಚು ರಾಷ್ಟ್ರಮಟ್ಟದಲ್ಲೇ ಕೇಂದ್ರೀಕೃತವಾಗುತ್ತಿದೆ ಎಂಬ ಆರೋಪಗಳ ಮಧ್ಯೆಯೇ ರಾಜ್ಯಗಳ ಸಾಮಾಜಿಕ ಮಾಧ್ಯಮಗಳ ಹೊಣೆಗಾರಿಕೆಯನ್ನು ಅಮಿತ್ ಶಾ ಕೇಂದ್ರ ನಾಯಕರಿಗೆ ನೀಡಿದ್ದಾರೆ.
ಪ್ರತಿ ರಾಜ್ಯದ ಸೋಷಿಯಲ್ ಮೀಡಿಯಾ ಘಟಕಗಳ ಕಾರ್ಯಕ್ರಮಗಳನ್ನು ಕೇಂದ್ರ ತಂಡ ನಿರ್ವಹಿಸಲಿದೆ. ಪ್ರಧಾನ ಮಂತ್ರಿ ಮೋದಿ ಪಾಲ್ಗೋಳ್ಳುವ ಪ್ರತಿ ರ್ಯಾಲಿಯ ವಿಡಿಯೋಗಳನ್ನು ಸ್ಥಳೀಯ ಭಾಷೆಯಲ್ಲೇ ವಾಯ್ಸ್ ರೆಕಾರ್ಡಿಂಗ್ ಮಾಡಿ ಹಾಗೂ ಎಡಿಟ್ ಮಾಡಿ ಆಯಾ ರಾಜ್ಯ ಘಟಕಗಳಿಗೆ ಕಳುಹಿಸಲಾಗುತ್ತದೆ. ಆ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವ ಕೆಲಸ ಮಾತ್ರ ಆಯಾ ರಾಜ್ಯಗಳ ಸೋಷಿಯಲ್ ಮೀಡಿಯಾ ಘಟಕದ ಕೆಲಸವಾಗಿದೆ ಎಂದು ಕರ್ನಾಟಕ ಸಾಮಾಜಿಕ ಘಟಕ ತಿಳಿಸಿದೆ.
ಪ್ರತಿಯೊಂದು ರಾಜ್ಯಗಳ ಟ್ವಿಟ್ಟರ್ ಅಕೌಂಟ್ ಚೆಕ್ ಮಾಡಿ ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಅತಿ ಹೆಚ್ಚಿನ ಕಾರ್ಯಕ್ಷಮತೆ ತೋರುವ ರಾಜ್ಯಗಳಿಗೆ ಕೇಂದ್ರ ಅಭಿನಂದನೆ ಸಲ್ಲಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


