ಏರೋ ಇಂಡಿಯಾ 2019; ತೇಜಸ್ ಯುದ್ಧ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್
ಸಮರಕ್ಕೆ ಸನ್ನದ್ಧವಾಗಿರುವ ಭಾರತದ ಹಗುರ ಯುದ್ಧ ವಿಮಾನ ತೇಜಸ್ ಎಂಕೆ 1ಗೆ ....

Published On :
ಬೆಂಗಳೂರು: ಸಮರಕ್ಕೆ ಸನ್ನದ್ಧವಾಗಿರುವ ಭಾರತದ ಹಗುರ ಯುದ್ಧ ವಿಮಾನ ತೇಜಸ್ ಎಂಕೆ 1ಗೆ ಅಂತಿಮ ಕಾರ್ಯಾಚರಣೆ ಅನುಮೋದನೆ ನೀಡಲಾಗಿದೆ.
ನಿನ್ನೆ ಬೆಂಗಳೂರಿನಲ್ಲಿ ಏರೋ ಇಂಡಿಯಾ ಶೋದ ಉದ್ಘಾಟನೆ ಬಳಿಕ ಸಂಶೋಧನೆ ಮತ್ತು ಅಭಿವೃದ್ಧಿಯ ರಕ್ಷಣಾ ಇಲಾಖೆ ನಿರ್ದೇಶಕ ಜಿ ಸತೀಶ್ ರೆಡ್ಡಿಯವರು ಅಧಿಕೃತವಾಗಿ ಅನುಮೋದನೆ ನೀಡಿದರು.
ಅನುಮೋದನೆ ನೀಡಿದ ನಂತರ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್) ಗೆ ಹಸ್ತಾಂತರ ಮಾಡಲಾಗಿದ್ದು ಅದು ಉತ್ಪಾದನೆಯನ್ನು ಆರಂಭಿಸಲಿದೆ ಎಂದು ರಕ್ಷಣಾ ಇಲಾಖೆಯ ಅಧಿಕೃತ ಹೇಳಿಕೆ ತಿಳಿಸಿದೆ.
ಈ ದಿನ ಖಗೋಳ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು ಮತ್ತು ವಾಯುಪಡೆಯ ಇತರ ಸಿಬ್ಬಂದಿಗೆ ಅತ್ಯಪೂರ್ವವಾದ ಗಳಿಗೆ, ತೇಜಸ್ ಯೋಜನೆಯಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳು ಅಭಿನಂದನಾರ್ಹರು ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕಾರ್ಯಾಚರಣೆoperationIndia\'s Light Combat Aircraft Tejas MK IFinal clearenceಭಾರತದ ಹಗುರ ಯುದ್ಧ ವಿಮಾನ ತೇಜಸ್ ಎಂಕೆ 1ಅಂತಿಮ ಅನುಮೋದನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


